ಅಪರಾಧ ಸುದ್ದಿ

ಗ್ರಾಮದಲ್ಲಿ ಬಹಿಷ್ಕಾರ: ಶವಸಂಸ್ಕಾರಕ್ಕೂ ಅಡ್ಡಿ

Share It


ಮೈಸೂರು: ಗ್ರಾಮಸ್ಥರ ಬಿಹಿಷ್ಕಾರಕ್ಕೆ ಒಳಗಾಗಿದ್ದ ಕುಟುಂಬವೊಂದರಲ್ಲಿ ಸಾವನ್ನಪ್ಪಿದ ವಿಕಲಚೇತನ ಬಾಲಕನ ಶವಸಂಸ್ಕಾರಕ್ಕೂ ಅವಕಾಶ ನೀಡದ ಗ್ತಾಮಸ್ಥರು ಅಮಾನವೀಯವಾಗಿ ನಡೆದುಕೊಂಡ ಘಟನೆ ಹುಲ್ಲಹಳ್ಳಿ ಸಮೀಪದ ತರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕುಳ್ಳನಾಯಕ ಎಂಬುವವರ ಕುಟುಂಬಕ್ಕೆ ಗ್ರಾಮಸ್ಥರು ಕೆಲವು ವರ್ಷಗಳ ಹಿಂದೆ ಬಹಿಷ್ಕಾರ ಹಾಕಿದ್ದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆ, ಸೇರಿ ಸರಕಾರಿ ಕಚೇರಿಗಳಿಗೆ ಅರ್ಜಿ ಕೊಟ್ಟ ಸುಸ್ತಾಗಿದ್ದರು‌ ಪೊಲೀಸರು ಸೇರಿ ಅಧಿಕಾರಿಗಳಾರೂ ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಂಡಿರಲಿಲ್ಲ. ಇದರ ಪರಿಣಾಮ ಈಗ ಶವಸಂಸ್ಕಾರಕ್ಕೂ ಅವಕಾಶ ಮಾಡಿಕೊಡದ ಗ್ತಾಮಸ್ಥರು ದೌರ್ಜನ್ಯ ಮೆರೆದಿದ್ದಾರೆ.

ಶನಿವಾರ ಕುಳ್ಳನಾಯಕ ಅವರ ವಿಕಲಚೇತನ ಪುತ್ರ ನಿಧನವಾಗಿದ್ದು, ಆತನ ಶವಸಂಸ್ಕಾರಕ್ಕೂ ಊರಿನ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಇದರಿಂದ ನೊಂದ ಕುಳ್ಳನಾಯಕ ತಮ್ನ ಮಗನ ಶವವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಮುಂದೆ ತೆಗೆದುಕೊಂಡು ಹೋಗಲು ತೀರ್ಮಾನಿಸಿದ್ದರು.

ವಿಷಯ ತಿಳೊದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕೂಡಲಢ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದ್ದ, ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ. ತಹಶಿಲ್ದಾರ್ ಹಾಗೂ ಆರ್ ಐ ಸ್ಥಳಕ್ಕೆ ಭೇಟಿ ನೀಡಿ, ಗ್ತಾಮಸ್ಥರ‌ ಮನವೊಲಿಸಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.


Share It

You cannot copy content of this page