ದೇವನಹಳ್ಳಿ : ಪಟ್ಟಣದ ಹಳೆ ತಾಲ್ಲೂಕು ಕಚೇರಿ ರಸ್ತೆಯ ಶ್ರೀ ಚೌಡೇಶ್ವರಿ ದೇವಾಲಯದ 11 ನೆಯ ವರ್ಷದ ವಾರ್ಷಿಕೋತ್ಸವ ಮತ್ತು ಅಕ್ಷಯ ತೃತೀಯ ಅಂಗವಾಗಿ ವಿಶೇಷ ಪೂಜೆ, ಚಂಡಿಕಾ ಹೋಮ, ಗಂಗಾ ಪೂಜೆ, ನವಚಂಡಿಕಾಯಾಗ ಮತ್ತು ಅಮ್ಮನವರಿಗೆ ವಿಶೇಷವಾದ ಪಂಜುರ್ಲಿ ದೈವ ಅಲಂಕಾರ ಸೇರಿ ದಿನಾಂಕ 9-5-24 ರ ಗುರುವಾರ ಮತ್ತು 10-5-24 ರ ಶುಕ್ರವಾರ ವಿವಿಧ ದಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಎಲ್ ಎನ್ ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ.
ದೇವನಹಳ್ಳಿಯ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಚೌಡೇಶ್ವರಿ ಅಮ್ಮನವರ ದೇವಾಲಯ ಸ್ಥಾಪನೆಯಾಗಿ ಹನ್ನೊಂದು ವರ್ಷಗಳಾಯಿತು ಈ ನಡುವೆ ಇಲ್ಲಿಗೆ ಹರಿದು ಬರುವ ಭಕ್ತರ ಧಾರ್ಮಿಕ ಭಕ್ತಿ ಭಾವದ ಪೂಜೆ ಪುನಸ್ಕಾರ ವಿಶೇಷ ಅಲಂಕಾರದಂತಹ ಕಾರ್ಯಕ್ರಮಗಳಿಂದ ಹನ್ನೊಂದು ವರ್ಷ ಕಳೆದದ್ದು ಗೊತ್ತೆ ಆಗಲಿಲ್ಲ ಪ್ರಾರಂಭದಿಂದಲೂ ದೇವನಹಳ್ಳಿ ಹಾಗೂ ಸುತ್ತಮುತ್ತಲಿನ ಇತರ ಭಾಗಗಳಿಂದಲೂ ಸಾಕಷ್ಟು ಪ್ರಮಾಣದಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಿದ್ದಾರೆ.
ಈ ಮೂಲಕ ಭಕ್ತರ ಸಂಕಷ್ಟಗಳು ಅಮ್ಮನವರ ಕೃಪೆಯಿಂದ ನಿವಾರಣೆಯಾಗಿದೆ ವರ್ಷ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ದೇವನಹಳ್ಳಿ ಯಲ್ಲಿ ಕಡಿಮೆ ಅವಧಿಯಲ್ಲಿ ಇಷ್ಟೊಂದು ಭಕ್ತರು ಭಕ್ತಿ ಭಾವದಿಂದ ನಡೆದುಕೊಂಡು ದೇವರ ಕೃಪೆಗೆ ಪಾತ್ರವಾಗಿರುವುದರಲ್ಲಿ ಚೌಡೇಶ್ವರಿ ಅಮ್ಮನವರ ದೇವಾಲಯ ಎಂದರೆ ತಪ್ಪಾಗಲಾರದು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿನ ಪ್ರಚಾರ ಕೂಡ ಕಡಿಮೆ ಅವದಿಯಲ್ಲಿ ದೇಗುಲ ಪ್ರಸಿದ್ಧಿ ಪಡೆಯಲು ಕಾರಣ ಅದ್ದರಿಂದ ಮಾಧ್ಯಮಗಳನ್ನು ಕೂಡ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.
ಹಿರಿಯ ಮುಖಂಡ ಶ್ರೀ ರಾಮೇಗೌಡ ಮಾತನಾಡಿ, ಇಡೀ ದೇಶದಲ್ಲೇ ಇಷ್ಟೊಂದು ಬಗೆಯ ವಿಶಿಷ್ಠವಾಗಿ ಅಲಂಕಾರಗೊಳ್ಳುವ ದೇವರು ನಾನು ಇನ್ನೆಲ್ಲೂ ನೋಡಿಲ್ಲ ಚೌಡೇಶ್ವರಿಯು ವಿಶಿಷ್ಟ ಮತ್ತು ವಿಶೇಷವಾದ ಅಲಂಕಾರಗಳಿಂದ ಸಂತೃಪ್ತಿ ಹೊಂದಿ ಭಕ್ತಾದಿಗಳ ಹಲವಾರು ಸಂಕಷ್ಟಗಳನ್ನು ನಿವಾರಣೆ ಮಾಡಿರುವ ಸಾಕಷ್ಟು ಉದಾಹರಣೆ ಇದೆ ಅದೇ ರೀತಿಯಲ್ಲಿ ಪ್ರತಿ ವರ್ಷ ದಂತೆ ಈ ವರ್ಷ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮ ಮತ್ತು ಅಲಂಕಾರ ನಡೆಯಲಿದೆ, ವಿಶೇಷವಾಗಿ ಕರಾವಳಿ ಪ್ರದೇಶದ ಪಂಜುರ್ಲಿ ದೈವದ ಅಲಂಕಾರ ಕಾರ್ಯಕ್ರಮ ಅಮ್ಮನವರಿಗೆ ಪ್ರಿಯವಾದ ಶುಕ್ರವಾರ ನಡೆಯಲಿದೆ, ಎಂದರು.
ಧಾರ್ಮಿಕ ಮುಖಂಡ ಗಂಗಾಧರ್ ಮಾತನಾಡಿ, ಪ್ರತಿವರ್ಷದಂತೆ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ, ವಿಶೇಷ ಅಲಂಕಾರ ಮಾಡಿ ಭಕ್ತಿ ಭಾವದಿಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ಅನ್ನಸಂತರ್ಪಣೆ ಮಾಡುವ ಮೂಲಕ ಮನೆ ಮನೆಗಳಲ್ಲಿ, ನಾಡಿನಲ್ಲಿ, ಶಾಂತಿ, ನೆಮ್ಮದಿ, ಸಮೃದ್ಧಿ, ಸಂತೋಷ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ, ಅಂತೆಯೇ ಚೌಡೇಶ್ವರಿ ಅಮ್ಮನವರಿಗೆ ಶಾಶ್ವತ ಪೂಜೆ ಹಾಗೂ ದಾಸೋಹ ಸೇವೆ ಮಾಡಿಸುವ ಸೇವಾಕರ್ತರಿಗೆ ಅಮ್ಮನವರ ಆಶೀರ್ವಾದದೊಂದಿಗೆ ಬೆಳ್ಳಿ ನಾಣ್ಯವನ್ನು ನೀಡಲಾಗುವುದು, ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಾಲಯ ಅಭಿವೃದ್ಧಿ ಸಮಿತಿಯ ಹನುಮಂತಪ್ಪ, ಗೋಪಾಲಕೃಷ್ಣ, ಅಶ್ವಥ್, ಜಯರಾಂ, ಮುನಿಸ್ವಾಮಿ, ಬಸವರಾಜು ದೇಗುಲದ ಅರ್ಚಕರಾದ ವೀರಯ್ಯಸ್ವಾಮಿ ಮುಂತಾದವರು ಇದ್ದರು.