ಸುದ್ದಿ

ಶೃಂಗೇರಿ ಶಾಸಕ ಸ್ಥಾನ ಜಟಾಪಟಿ: ರಾಜೇಗೌಡರನ್ನೇ ಶಾಸಕ ಸ್ಥಾನದಲ್ಲಿ ಮುಂದುವರಿಸಲು ಆದೇಶ

Share It

ನವದೆಹಲಿ: ಶೃಂಗೇರಿ ಶಾಸಕ ಸ್ಥಾನದ ಜಟಾಪಟಿಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ್ದು, ಕಾಂಗ್ರೆಸ್ ಶಾಸಕರನ್ನೇ ಮುಂದುವರಿಸುವಂತೆ ಆದೇಶ ನೀಡಿದೆ.

ಅಂಚೆ ಮತಗಳ ಎಣಿಕೆಗೆ ಹೈಕೋರ್ಟ್ ಅವಕಾಶ ಕೊಟ್ಟ ಬೆನ್ನಲ್ಲೇ, ಬಿಜೆಪಿ ಶಾಸಕ ಜೀವರಾಜ್ ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಅವರು ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದರು.

ಇದನ್ನು ಪ್ರಶ್ನಿಸಿ, ಕಾಂಗ್ರೆಸ್ ಶಾಸಕ ರಾಜೇಗೌಡ ಸುಪ್ರೀಂ ಕದ ತಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ರಾಜೇಗೌಡ ಅವರನ್ನೇ ಶಾಸಕ ಸ್ಥಾನದಲ್ಲಿ ಮುಂದುವರಿಸಲು ಸೂಚನೆ ನೀಡಿದೆ. ಪ್ರಜಾಪ್ರಭುತ್ವಕ್ಕೆ ಅಡ್ಡಿ ಮಾಡಲು ಬಿಡುವುದಿಲ್ಲ ಎಂದು ಹೇಳಿದೆ.


Share It

You cannot copy content of this page