ನಯವಾಗಿ ಬಿ.ಎಸ್.ವೈ ಮನವಿ ತಿರಸ್ಕರಿಸಿದ ಶ್ರೀನಿವಾಸ್ ಪ್ರಸಾದ್

Oplus_131072

Oplus_131072

Share It

ಮೈಸೂರು, (ಏಪ್ರಿಲ್ 24): ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ್​ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದ್ರೆ, ತಮ್ಮ ಬದಲಿಗೆ ಈ ಬಾರಿ ಚಾಮರಾಜನಗರ ಕ್ಷೇತ್ರದ ಟಿಕೆಟ್ ತಮ್ಮ ಅಳಿಯನಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಆದ್ರೆ, ಹೈಕಮಾಂಡ್​ ಶ್ರೀನಿವಾಸ್ ಪ್ರಸಾದ್​ ಅವರ ಮನವಿಗೆ ಮಣೆ ಹಾಕಿಲ್ಲ. ಇದರಿಂದ ಅವರು ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ವೈರತ್ವವನ್ನು ಮರೆತು ಶ್ರೀನಿವಾಸ್ ಪ್ರಸಾದ್​ ಅವರನ್ನು ಭೇಟಿ ಮಾಡಿ ಈ ಬಾರಿ ಕಾಂಗ್ರೆಸ್​ಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಂದು (ಏಪ್ರಿಲ್ 14) ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಶ್ರೀನಿವಾಸ್​ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ನಡೆಯಲಿರುವ ಮೋದಿ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡುವ ಮೂಲಕ ಮನವೊಲಿಸುವ ಯತ್ನ ಮಾಡಿದ್ದಾರೆ. ಆದ್ರೆ, ಬಿಎಸ್​ವೈ ಅವರ ಆಹ್ವಾನವನ್ನು ಶ್ರೀನಿವಾಸ್ ಪ್ರಸಾದ್​ ನಯವಾಗಿ ತಿರಸ್ಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ-ಶ್ರೀನಿವಾಸ್ ನಡುವಿನ ಮಾತುಕತೆ ಇಲ್ಲಿದೆ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿದಂತೆ ಇತರೆ ನಾಯಕರು ಇಂದು ಮೈಸೂರಿನ ಜಯಲಕ್ಷ್ಮಿಪುರಂದಲ್ಲಿರುವ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಹೂಗುಚ್ಚ ನೀಡಿ ಆತ್ಮೀಯವಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬಿಎಸ್​ವೈ ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ವಿಚಾರಿಸಿ ಮೋದಿ ಕಾರ್ಯಕ್ರಮಕ್ಕೆ ಬಂದು ಹೋಗಿ ಎಂದು ಮನವಿ ಮಾಡಿದ್ದಾರೆ.

ಆದ್ರೆ, ಇದಕ್ಕೆ ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯಿಸಿ, ಕೈ ಮುಗಿಯುತ್ತೇನೆ ಆಗುವುದಿಲ್ಲ. ಆರೋಗ್ಯ ಸ್ಪಂದಿಸಲ್ಲ. ನಾನು ಬಿಜೆಪಿಯಿಂದಲೇ ನಿವೃತ್ತಿ ಆಗಿದ್ದೇನೆ. ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಆರೋಗ್ಯದ ನೆಪ ಹೇಳಿ ಮೋದಿ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಮೋದಿ ಜಾಗತಿಕ ನಾಯಕ, ಅವರ ಮೇಲೆ ಬಹಳ ಗೌರವ ಇದೆ. ಅವರ ಬಗ್ಗೆ, ಬಿಜೆಪಿ ಬಗ್ಗೆ ಯಾವುದೇ ಮಾತಾಡಿಲ್ಲ. ನಿವೃತ್ತಿ ಆಗಿರುವುದಿರಂದ ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲರು ಬಂದು ಆರೋಗ್ಯ ವಿಚಾರಿಸಿದ್ದಾರೆ. ವಿಜಯೇಂದ್ರ ಎರಡು ಬಾರಿ ಬಂದಿದ್ರು. ನಮ್ಮ ಅಳಿಯ ಹರ್ಷ ಅವರು ಬಹಳ ಸಂಪರ್ಕದಲ್ಲಿ ಇದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್, ಬಿಎಸ್​ವೈಗೆ ಹೇಳಿದರು.

ಬಿಎಸ್​​ವೈ ಆಹ್ವಾನ ತಿರಸ್ಕರಿಸಿದ ಶ್ರೀನಿವಾಸ್ ಪ್ರಸಾದ್
ನೀವು ಬಹಳ ಬ್ಯುಸಿ ಇದ್ದೀರ. ಚಿತ್ರದುರ್ಗದಿಂದ ಬಂದಿದ್ದೀರಾ, ನಿಮ್ಮ ಆರೋಗ್ಯ ಚೆನ್ನಾಗಿದೆ. ಬಹಳ ಚೆನ್ನಾಗಿ ಕಾಪಾಡಿಕೊಂಡಿದ್ದೀರಾ ಎಂದು ಶ್ರೀನಿವಾಸ್​ ಯಡಿಯೂರಪ್ಪಗೆ ಕಾಂಪ್ಲಿಮೆಂಟರಿ ನೀಡಿದ್ದಾರೆ. ಆಗ ಬಿಎಸ್​ವೈ, ಮೋದಿ ಬರುತ್ತಾರೆ ಸ್ವಲ್ಪವೊತ್ತು ಬಂದು ಕುಳಿತು ಹೋಗಿ ಎಂದು ಮತ್ತೆ ಮನವಿ ಮಾಡಿದ್ದಾರೆ. ಇಲ್ಲ ಆಗಲ್ಲ. ಮೋದಿ ಜೊತೆ ತುಂಬಾ ಸಾರಿ ವೇದಿಕೆ ಹಂಚಿಕೊಂಡಿದ್ದೇನೆ. ಈಗ ಸ್ವಲ್ಪ ದೂರವೂ ನಡೆಯಲು ಆಗಲ್ಲ ಎಂದರು. ಈ ಮೂಲಕ ಶ್ರೀನಿವಾಸ್ ಪ್ರಸಾದ್ ನಯವಾಗಿ ಮಾತನಾಡುತ್ತಲೇ ಯಡಿಯೂರಪ್ಪ ಆಹ್ವಾನ ತಿರಸ್ಕರಿಸಿದರು.

ಕಾಂಗ್ರೆಸ್ ಸೇರಿರುವ ಶ್ರೀನಿವಾಸ್​ ಪ್ರಸಾದ್ ಬೆಂಬಲಿಗರು
ಬಿಜೆಪಿ ಟಿಕೆಟ್​ ಕೈತಪ್ಪಿದ ಬಳಿಕ ಯಾವೊಬ್ಬ ನಾಯಕರು ಬಂದು ಮಾತನಾಡಿಸಿಲ್ಲ ಎಂದು ಮುನಿಸಿಕೊಂಡಿರುವ ಶ್ರೀನಿವಾಸ್ ಪ್ರಸಾದ್​ ಅವರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಖುದ್ದು ಸಿದ್ದರಾಮಯ್ಯ ಹಾದಿಯಾಗಿ ಮಂತ್ರಿಗಳು ಸಹ ಶ್ರೀನಿವಾಸ್ ಪ್ರಸಾದ್ ಮನೆ ತೆರಳಿ ಬೆಂಬಲ ಕೋರಿದ್ದಾರೆ. ಇದಕ್ಕೆ ಸಕರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅವರ ಬೆಂಬಲಿಗರು, ಸಂಬಂಧಿಗಳು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಇದರಿಂದ ಬಿಜೆಪಿಗೆ ಆಘಾತವಾಗಿದೆ.

ಇದೀಗ ಯಡಿಯೂರಪ್ಪ ಅವರು ಆರೋಗ್ಯ ವಿಚಾರಿಸುವ ಹಾಗೂ ಮೋದಿ ಕಾರ್ಯಕ್ರಮದ ನೆಪದಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಮನವೊಲಿಸುವ ಪ್ರಯತ್ನಿಸಿದ್ದಾರೆ. ಆದ್ರೆ, ಶ್ರೀನಿವಾಸ್​ ಪ್ರಸಾದ್​ ಆರೋಗ್ಯ ನೆಪ ಹೇಳಿ ಮೋದಿ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.


Share It

You cannot copy content of this page