ಉಪಯುಕ್ತ ಸುದ್ದಿ

SSLC ಫಲಿತಾಂಶ 2026 ಶೀಘ್ರದಲ್ಲೇ

Share It

ಕರ್ನಾಟಕದ 10ನೇ ತರಗತಿ (SSLC) ವಿದ್ಯಾರ್ಥಿಗಳ ಫಲತಾಂಶ ಕಾಯುವಿಕೆ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ. ನಾಳೆ ಅಥವಾ ನಾಡಿದ್ದು (ಏ.23, 24) ಫಲಿತಾಂಶ ಬರಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಕೆಲವೊಂದು ಮೂಲಗಳ ಪ್ರಕಾರ ಮೇ ತಿಂಗಳ ಆರಂಭದಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂಕಪಟ್ಟಿಯನ್ನು ಪಡೆಯಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಗೊಂದಲು ಮಾಡಿಕೊಳ್ಳುವುದು ಬೇಡ, ಫಲಿತಾಂಶ ಈ ವಾರದಲ್ಲಿ ಅಥವಾ ಮುಂದಿನ ತಿಂಗಳು ಬಂದರು ಎಲ್ಲದಕ್ಕೂ ಸಿದ್ಧರಾಗಿರುವುದು ಒಳ್ಳೆಯದು.

ಕಳೆದ ಎರಡು ವರ್ಷಗಳ (2024 ಮತ್ತು 2025) ಅಂಕಿಅಂಶಗಳನ್ನು ಗಮನಿಸಿದರೆ, ಫಲಿತಾಂಶವು ಮೇ 9ರ ಸುಮಾರಿಗೆ ಪ್ರಕಟವಾಗಿತ್ತು. ಈ ವರ್ಷವೂ ಮಂಡಳಿಯು ಅದೇ ಸಮಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಫಲಿತಾಂಶ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ ಈ ಹಿಂದೆ ಏಪ್ರಿಲ್ 23 ಅಥವಾ 24ಕ್ಕೆ ಫಲಿತಾಂಶ ಪ್ರಕಟ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು


Share It

You cannot copy content of this page