ಕ್ರೀಡೆ ಸುದ್ದಿ

“ಸನ್ಸ್ ರೈಸರ್ಸ್” ವಿರುದ್ಧ ಸೂಪರ್ ಗೆಲವು

Share It


ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 78 ರನ್ಗಳ ಗೆಲುವು ಸಾಧಿಸುವ ಮೂಲಕ ಚೆನ್ನೈ ಸಊಪರ್ ಕಿಂಗ್ಸ್ ಎಸ್ಆರ್ಎಚ್ ವಿರುದ್ಧ ಸೇಡು ತೀರಿಸಿಕೊಂಡಿದೆ. ಈ ಸೋಲಿನ ಮೂಲಕ ಲಯದಲ್ಲಿದ್ದ ಎಸ್ಆರ್ಎಚ್ ಸತತ ಎರಡನೇ ಸೋಲು ಕಂಡಂತಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 212 ರನ್ ಕಲೆಹಾಕಿತ್ತು. ಗುರಿಯನ್ನು ಬೆನ್ನತ್ತಿದ ಎಸ್ಆರ್ಎಚ್ ತಂಡ 134 ರನ್ಗಳಿಸಲಷ್ಟೇ ಶಕ್ತವಾಗುವ ಮೂಲಕ 78 ರನ್ಗಳ ಸೋಲುಂಡಿತು. ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್ 56 ಎಸೆತಗಳಲ್ಲಿ 98 ರನ್ಗಳಿಸಿ, ಎರಡು ರನ್ ಅಂತರದಿಂದ ಮತ್ತೊಂದು ಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡರು.

ನಾಯಕನಿಗೆ 39 ರನ್ ಗಳಿಸಿದ ಶಿವಂ ದುಬೆ, 52 ರನ್ ಗಳಿಸಿದ ಡರೆನ್ ಮಿಚಲ್ ಸಾಥ್ ನೀಡಿದರು. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ಚೆನ್ನೈ ತಂಡ 2012 ರನ್ಗಳಿಸಿ, 213 ರನ್ಗಳ ಸವಾಲನ್ನು ಹೈದರಾಬಾದ್ ತಂಡಕ್ಕೆ ನೀಡಿತ್ತು. ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ಸರಣಿಯಲ್ಲಿ ಸತತ ಎರಡನೇ ಬಾರಿಗೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.

ಟ್ರಾವಿಸ್ ಹೆಡ್, ಕ್ಲಾಸೆನ್ ಮತ್ತು ಅಭಿಶೇಕ್ ಶಮರ್ಾ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಸನ್ ರೈಸರ್ಸ್ ತಂಡ 18.5 ಓವರ್ಗಳಲ್ಲಿ 134 ರನ್ ಳನ್ನಷ್ಟೇ ಗಳಿಸಿತು. ಆ ಮೂಲಕ 78 ರನ್ಗಳ ಸೋಲು ಕಂಡಿತು.


Share It

You cannot copy content of this page