ಕ್ರೀಡೆ ಸುದ್ದಿ

ಆರ್‌ಸಿಬಿ ಅಭಿಮಾನಿಗಳಿಗೆ ಜಾಕ್ ಫ್ರೂಟ್

Share It


ಅಹಮದಾಬಾದ್: ಸತತ ಸೋಲಿನಿಂದ ಕಂಗೆಟ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಆರ್‌ಸಿಬಿ ತಂಡ ಅಭಿಮಾನಿಗಳಿಗೆ ಹಲಸಿನ ಹಣ್ಣಿನ ಸಿಹಿ ತಿನಿಸಿದೆ. ಆರ್ಭಟಿಸಿದ ಜಾಕ್ ಫ್ರೂಟ್ ಹಂಚಿಕೆ ಮೂಲಕ ಅಭಿಮಾನಿಗಳ ಮನದಲ್ಲಿ ಉಲ್ಲಾಸ ಮೂಡಿಸಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಟಾಟಾ ಐಪಿಎಲ್‌ನ 45ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ಸಾಯಿ ಸುದರ್ಶನ್ (84*) ಅವರ ಅಜೇಯ ಅರ್ಧಶತಕ ಮತ್ತು ಶಾರುಖ್ ಖಾನ್ (54) ಅವರ ವೇಗದ ಅರ್ಧಶತಕದ ನೆರವಿನಿಂದ ನಿಗದಿತ 2೦ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 2೦೦ ರನ್ ಕಲೆ ಹಾಕಿತ್ತು.

ಇದಕ್ಕೆ ಪ್ರತ್ಯುತ್ತರವಾಗಿ ಆರ್‌ಸಿಬಿ ವಿಲ್ ಜಾಕ್ಸ್ (1೦೦) ಬಿರುಸಿನ ಶತಕ ಮತ್ತು ವಿರಾಟ್ ಕೊಹ್ಲಿ (7೦) ಅಜೇಯ ಅರ್ಧಶತಕದ ನೆರವಿನಿಂದ ಒಂದು ವಿಕೆಟ್ ಕಳೆದುಕೊಂಡು 24 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಇದು ಆರ್‌ಸಿಬಿಯ ಮೂರನೇ ಗೆಲುವಾಗಿದೆ. ಆದರೆ, ಗೆಲುವಿನ ನಂತರವೂ ಅಂಕಪಟ್ಟಿಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.

ಜಾಕ್ಸ್ ಫ್ರೂಟ್ ಶತಕ: ವಿಲ್ ಜಾಕ್ಸ್ ಜಾಕ್ ಫ್ರೂಟ್ ತರಹದ ಸಿಹಿಯನ್ನು ತಿಸಿಸುವ ಜತೆಗೆ, ಹಲಸಿನ ಹಣ್ಣು ಜೋಡಿಸಿದಂತೆ ರನ್ ಗೋಪುರ ಕಟ್ಟಿದರು. ಇದರ ಪರಿಣಾಮ ಆರ್‌ಸಿಬಿ ಸುಲಭ ಗೆಲುವು ಸಾಧಿಸಿತು. ವಿಲ್ ಜಾಕ್ಸ್ 41 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ ಶತಕ ಸಿಡಿಸಿದರು. ಜಾಕ್ಸ್ 16 ನೇ ಓವರ್‌ನಲ್ಲಿ ರಶೀದ್ ಖಾನ್ ಎಸೆತದಲ್ಲಿ 4 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕ ಪೂರೈಸಿದರು.


Share It

You cannot copy content of this page