– ಪ್ರಾದೇಶಿಕ ಅಸ್ಮಿತೆಯ ಪಕ್ಷವನ್ನು ಮುಗಿಸಲು ಸ್ಕೆಚ್
– ವೈಯಕ್ತಿಕ ಲಾಭಕ್ಕೆ ಪಕ್ಷ ಬಲಿಕೊಟ್ಟ ಗೌಡರ ಕುಟುಂಬ
ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ರಾಷ್ಟಿçÃಯ ಪಕ್ಷ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಜ್ಯಾತ್ಯಾತೀತದ ಹಿನ್ನೆಲೆಯಲ್ಲಿಯೇ ತನ್ನ ಅಸ್ತಿತ್ವ ಕಾಪಾಡಿಕೊಂಡು ಬಂದಿದ್ದ, ಜಾತ್ಯಾತೀತ ಜನತಾದಳ ಈಗ ಕೋಮುವಾದಿ ಪಕ್ಷ ಎನಿಸಿಕೊಳ್ಳುವ ಬಿಜೆಪಿ ಜತೆಗೆ ಸಖ್ಯ ಬೆಳೆಸಿರುವುದು ಕೌತುಕದ ವಿಷಯವೇ ಆಗಿದೆ.
ಜ್ಯಾತ್ಯಾತೀತ ತತ್ವಗಳಲ್ಲಿ ನಂಬಿಕೆಯಿಟ್ಟವರೆಲ್ಲ ಬಿಜೆಪಿಯನ್ನು ಬಹಳ ವರ್ಷಗಳಿಂದ ವಿರೋಧಿಸುತ್ತಲೇ ಬರುತ್ತಿದ್ದಾರೆ. ಅಂತೆಯೇ ಜೆಡಿಎಸ್ ಕೂಡ ಬಿಜೆಪಿಯನ್ನು ವಿರೋಧಿಸುತ್ತಲೇ ರಾಜಕಾರಣ ಮಾಡಿತ್ತು. ಕೋಮುವಾದಿಗಳನ್ನು ಅಧಿಕಾರದಿಂದ ದೂರಯಿಡುವ ಉದ್ದೇಶದಿಂದ ಜ್ಯಾತ್ಯಾತೀತ ತತ್ವಗಳಲ್ಲಿ ನಂಬಿಕೆಯಿರುವ ಕಾಂಗ್ರೆಸ್ ಜತೆ ಇರುತ್ತೇವೆ ಎಂದು ಕಳೆದ ೨೦೧೮ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಸೇರಿ ಸರಕಾರ ರಚನೆ ಮಾಡಿದ್ದರು.
ಇದೀಗ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಇದೇ ಕೋಮುವಾದಿ ಬಿಜೆಪಿ ಜತೆಗೆ ಕೈ ಜೋಡಿಸುವ ಮೂಲಕ ತನ್ನ ಜ್ಯಾತ್ಯಾತೀತ ಸಿದ್ಧಾಂತಕ್ಕೆ ತೀಲಾಂಜಲಿ ಬಿಟ್ಟಿದೆ. ದೇಶದಲ್ಲಿ ಇದೇ ರೀತಿ ಅಧಿಕಾರಕ್ಕಾಗಿಯೋ, ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿಯೋ, ಕುಟುಂಬದ ಒಳಿತಿಗಾಗಿಯೋ ಬಿಜೆಪಿ ಜತೆಗೆ ಕೈಜೋಡಿಸಿದ ಅನೇಕ ಪ್ರಾದೇಶಿಕ ಪಕ್ಷಗಳು ಒಂದೊAದಾಗಿ ಹೇಳ ಹೆಸರಿಲ್ಲದಂತೆ ಅಳಿಸಿಹೋಗಿವೆ. ಈಗ ಅದೇ ಸಾಲಿಗೆ ಜೆಡಿಎಸ್ ಕೂಡ ಸೇರಲಿದೆ ಎನ್ನಲಾಗುತ್ತಿದೆ.
ಜೆಡಿಎಸ್‌ಗೆ ಮೂರು ಲೋಕಸಭೆ ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಟ್ಟಿದೆ. ಇನ್ನುಳಿದ ಯಾವುದೇ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಹಾಕುವುದಿಲ್ಲ. ರಾಜ್ಯಾದ್ಯಂತ ಗೆಲ್ಲಲು ಸಾಧ್ಯವಿಲ್ಲದಿದ್ದರೂ, ಅನೇಕ ಕ್ಷೇತ್ರಗಳಲ್ಲಿ ಸೋಲು-ಗೆಲುವಿನ ನಿರ್ಧಾರ ಮಾಡುವಂತಹ ಸ್ಥಿತಿಯನ್ನು ಜೆಡಿಎಸ್ ಹಿಂದೆ ಉಳಿಸಿಕೊಂಡಿತ್ತು. ಈ ಚುನಾವಣೆಯಲ್ಲಿ ಅಂತಹ ಅಸ್ತಿತ್ವವನ್ನು ಜೆಡಿಎಸ್ ಕಳೆದುಕೊಳ್ಳಲಿದೆ. ಅಲ್ಲಿ ಜೆಡಿಎಸ್ ಸಂಪೂರ್ಣವಾಗಿ ನಾಶವಾದರೆ ಆಶ್ಚರ್ಯವಿಲ್ಲ.
ಉಳಿದಂತೆ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಮೂರು ಕ್ಷೇತ್ರಗಳ ಪೈಕಿ ಹಾಸನದಲ್ಲಿ ಜೆಡಿಎಸ್‌ಗೆ ಭದ್ರ ನೆಲೆಯಿತ್ತು. ಆದರೆ, ಸಕಲೇಶಪುರ ಮತ್ತು ಬೇಲೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಹಾಸನದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಹಿಡಿತವಿದೆ. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಬಗ್ಗೆ ಈ ಮೂರು ಕ್ಷೇತ್ರವೂ ಸೇರಿದಂತೆ ಯಾವುದೇ ಬಿಜೆಪಿ ಕಾರ್ಯಕರ್ತರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಪ್ರೀತಂ ಗೌಡ ಅಂತೂ ಪ್ರಜ್ವಲ್‌ಗೆ ಟಿಕೆಟ್ ಕೊಟ್ಟರೆ ತಮ್ಮ ಸಹಕಾರವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಹೀಗಾಗಿ, ಈ ಕ್ಷೇತ್ರದಲ್ಲಿ ಗೆಲುವಿಗೆ ಸ್ವಂತ ಬಲವಿದ್ದರೂ, ಸೋಲು ಯಾರಿಂದ ಬೇಕಾದರೂ ಬರಬಹುದು.
ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿಯೇ ಅಭ್ಯರ್ಥಿಯಾಗಲೀ ಎನ್ನುತ್ತಿದಾರೆ ಬಿಜೆಪಿ ನಾಯಕರು. ಮಂಡ್ಯ ಅಭ್ಯರ್ಥಿ ಕುಮಾರಸ್ವಾಮಿ ಆದರೆ, ಗೆಲುವು ಕೂಡ ಅಷ್ಟೇನೂ ಸುಲಭವಲ್ಲ. ಕುಮಾರಸ್ವಾಮಿ ಗೆದ್ದರೆ ಬಿಜೆಪಿ ಇರುವ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಹೀಗಾಗಿ, ಬಿಜೆಪಿಯ ಸ್ಥಳೀಯ ನಾಯಕರೇ ಕಾಂಗ್ರೆಸ್ ಜತೆಗೆ ಒಳಗೊಳಗೆ ಕೆಲಸ ಮಾಡುವ ಸಾಧ್ಯತೆಯಿದೆ ಎನ್ನುತ್ತವೆ ಮೂಲಗಳು.
ಒಂದು ವೇಳೆ ಕುಮಾರಸ್ವಾಮಿ ಗೆಲುವು ಸಾಧಿಸಿದರೆ, ತಮ್ಮ ಚನ್ನಪಟ್ಟಣ್ಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಗ ಅಲ್ಲಿ ಸಿ.ಪಿ.ಯೋಗೇಶ್ವರ್ ಗೆಲುವಿಗೆ ಸಹಕರಿಸಬೇಕು. ಆ ಮೂಲಕ ರಾಮನಗರ ಜಿಲ್ಲೆಯ ಮೇಲಿನ ಹಿಡಿತವನ್ನು ತಾವಾಗಿಯೇ ಕಳೆದುಕೊಂಡAತಾಗುತ್ತದೆ. ಮುಂದೆ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಇದು ಜೆಡಿಎಸ್‌ಗೆ ಅಪಾಯದ ಸಂಕೇತ ಎಂದೇ ಹೇಳಬಹುದು.
ಇನ್ನು ಕೋಲಾರದಲ್ಲಿ ಜೆಡಿಎಸ್‌ಗೆ ಭದ್ರ ನೆಲೆಯಿದೆ. ಆದರೆ, ಬಿಜೆಪಿ ಅಲ್ಲಿನ ಲೋಕಸಭಾ ಸದಸ್ಯ ಮುನಿಸ್ವಾಮಿ ಗೆಲುವು ಕಷ್ಟ ಎಂಬ ಕಾರಣಕ್ಕೆ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಟ್ಟಿದೆ. ಕೋಲಾರದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಅಷ್ಟೇನೂ ಗಟ್ಟಿಯಿಲ್ಲ. ಆದರೆ, ಕಾಂಗ್ರೆಸ್ ಜತೆಗೆ ಒಳಗೊಳಗೆ ಕೈಜೋಡಿಸಿದರೆ, ಜೆಡಿಎಸ್ ಕತೆಯನ್ನು ಆರಾಮದಾಯಕವಾಗಿ ಮುಗಿಸಿಬಿಡಬಹುದು.
ಹೀಗೆ ಜೆಡಿಎಸ್ ಅನ್ನು ಹಂತಹAತವಾಗಿ ಮುಗಿಸಿದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮಾತ್ರವೇ ಅವರ ಏಕೈಕ ಎದುರಾಳಿ. ಇಂತಹ ಆಲೋಚನೆಯಲ್ಲಿಯೇ ಬಿಜೆಪಿ ನಾಯಕರು ತಮ್ಮ ಖೆಡ್ಡಾಗೆ ಕೆಡವಿಕೊಂಡಿದ್ದು, ಸದಾ ರಾಜಕೀಯ ತಂತ್ರಗಾರಿಕೆಗೆ ಹೆಸರು ಮಾಡಿದ್ದ, ಜೆಡಿಎಸ್ ವರಿಷ್ಠರು ಮಾತ್ರ ಅದೇಕೋ ಪೆಚ್ಚು ಮೋರೆ ಹಾಕಿಕೊಂಡು ಬಿಜೆಪಿಗೆ ಜೈ ಎನ್ನುತ್ತಿದ್ದಾರೆ. ಬಿಜೆಪಿಯ ಧರ್ಮ ರಾಜಕಾರಣದ ಅಸ್ತಿತ್ವವನ್ನು ಸ್ವತಂ ಜೆಡಿಎಸ್ ಕಾರ್ಯಕರ್ತರೇ ವಿರೋಧಿಸುತ್ತಿದ್ದು, ಇದು ಜೆಡಿಎಸ್ ಅಸ್ತಿತ್ವದ ಮೇಲೆ ಪೆಟ್ಟು ಕೊಡುವ ಎಲ್ಲ ಸಾಧ್ಯತೆಗಳನ್ನು ತೆರೆದಿಟ್ಟಿದೆ