ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರು, ನಸರ್್ಗಳು ಸೇರಿದಂತೆ ಫಾರ್ಮಸಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಗದಿ ಮಾಡಬಾರದು ಎಂದು ಹೈಕೋಟರ್್ ಆದೇಶ ನೀಡಿದೆ.
ಕೇಂದ್ರ ಚುನಾವಣಾ ಆಯೋಗ, ರಾಜ್ಯ ಸಕರ್ಾರ ಮತ್ತು ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿರುವ ಹೈಕೋಟರ್್, ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೆ ಹೈಕೋಟರ್್ ನೀಡಿರುವ ಆದೇಶವನ್ನು ಉಲ್ಲೇಖಿಸಿ ಈ ಆದೇಶವನ್ನು ನೀಡಲಾಗುತ್ತಿದೆ. ಯಶವಂತಪುರದ ಇಎಸ್ಐ ಡಿಸ್ಪೆನ್ಸರಿಯಲ್ಲಿ ಫಾರ್ಮಸಿ ಅಧಿಕಾರಿಯಾಗಿರುವ ಕೆ. ಪ್ರದೀಪ್ ಮತ್ತಿತರರು ಈ ಕುರಿತು ಹೈಕೋಟರ್್ನಲ್ಲಿ ಅಜರ್ಿ ಸಲ್ಲಿಸಿದ್ದರು. ಅಜರ್ಿ ವಿಚಾರಣೆಯು ನ್ಯಾಯಮೂತರ್ಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠದಿಂದ ನಡೆದು, ಆದೇಶ ಹೊರಬಿದ್ದಿದೆ.
ಈ ಹಿಂದಿನ ಚುನಾವಣೆಗಳಲ್ಲಿಯೂ ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಎಂದು ಹೇಳಲಾಗಿದೆ. ಆದರೆ, ಈ ಸಲ ಮತ್ತೆ ಚುನಾವಣೆಯಲ್ಲಿ ಅವರನ್ನು ನಿಯೋಜನೆ ಮಾಡಲಾಗಿದ್ದು, ಇದು ಭಾರತೀಯ ಚುನಾವಣಾ ಆಯೋಗ ಹೊರಡಿಸಿರುವ ಕೈಪಿಡಿಗೆ ವಿರುದ್ಧವಾದ ತೀಮರ್ಾನವಾಗಿದೆ. ಚುನಾವಣಾ ಆಯೋಗವೇ ವೈದ್ಯರು, ನಸರ್್ಗಳು ಮತ್ತು ಎಎನ್ಎಂಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಆದೇಶ ನೀಡಿದೆ. ಹಾಗಾಗಿ, ಅವರಿಗೆ ಸೇವೆಯಿಂದ ವಿನಾಯಿತಿ ನೀಡಬೇಕು ಎಂದು ನ್ಯಾಯಾಲಯ ನಿದರ್ೇಶನ ನೀಡಿದೆ.
ಅಜರ್ಿದಾರರ ಪರ ವಾದಿಸಿದ ವಕೀಲ ಬಿ.ಎಂ. ಸಂತೋಷ್ ವಾದ ಮಂಡನೆ ಮಾಡಿದ್ದು, ಚುನಾವಣೆ ನಿಯಮದಲ್ಲಿ ವೈದ್ಯರು, ನಸರ್್, ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿ ನೀಡಿದೆ. ಆದರೆ, ಬಿಬಿಎಂಪಿಯಿಂದ ಕಾನೂನು ಬಾಹಿರವಾಗಿ ಫಾರ್ಮಸಿ ಅಧಿಕಾರಿಗಳಿಗೆ ಕಡ್ಡಾಯವಾಗಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು