ಉಪಯುಕ್ತ ಸುದ್ದಿ

ವಿದ್ಯುತ್ ಚಿತಾಗಾರ ತಾತ್ಕಾಲಿಕ ಸ್ಥಗಿತ

Share It

ಬೆಂಗಳೂರು: ದಕ್ಷಿಣ ವಲಯ ವ್ಯಾಪ್ತಿಯ ಬನಶಂಕರಿ ವಿದ್ಯುತ್ ಚಿತಾಗಾರವನ್ನು ತುತರ್ು ನಿರ್ವಹಣೆ ಪ್ರಯುಕ್ತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯ ಬನಶಂಕರಿ ವಿದ್ಯುತ್ ಚಿತಾಗಾರದ ಎರಡು ಪನರ್ೆಸ್ಗಳ ಕಾಯಿಲ್ಗಳು ಹಾಗೂ ಬ್ರಿಕ್ಸ್ಗಳು ಹಾಳಾಗಿರುವುದರಿಂದ ತುತರ್ು ನಿರ್ವಹಣೆ ಕೆಲಸದ ಸಂಬಂಧ ದಿನಾಂಕ: 06-04-2024 ರಿಂದ 16-04-2024 ವರೆಗೂ 10 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ಸಂಬಂಧ ಸಾರ್ವಜನಿಕರು ಸಹಕರಿಸಬೇಕು. ಶವಸಂಸ್ಕಾರಕ್ಕೆ ಪಯರ್ಾಯ ಮಾರ್ಗಗಳನ್ನು ಬಳಸಿಕೊಳ್ಳಬೇಕು ಎಂದು ದಕ್ಷಿಣ ವಲಯದ ಕಾರ್ಯಪಾಲಕ ಅಭಿಯಂತರರು(ವಿದ್ಯುತ್) ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರಾಮಾಂಜಿನಯ್ಯ, ಕಾರ್ಯಪಾಲಕ ಅಭಿಯಂತರರು(ದಕ್ಷಿಣ ವಲಯ), ಬಿಬಿಎಂಪಿ. ಅವರ ಮೊಬೈಲ್ ಸಂಖ್ಯೆ 9480688529 ಗೆ ಸಂಪಕರ್ಿಸಬಹುದು.


Share It

You cannot copy content of this page