ಅಂಕಣ ರಾಜಕೀಯ ಸುದ್ದಿ

ಉತ್ತರ ಭಾರತದಂತೆಯೇ ಆಗುತ್ತಿದೆ ರಾಜ್ಯ ಚುನಾವಣಾ ಕಣ

Share It

ಲೋಕಸಭೆ ನಾಡಿನ ಹಬ್ಬದಂತೆ ನಡೆಯಬೇಕಾದ ಚುನಾವಣೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಹಬ್ಬದ ರೀತಿಯಲ್ಲಿಯೇ ನಡೆಯಬೇಕು ಎಂಬುದು ಸಂವಿಧಾನ ಕತೃಗಳ ಆಶಯ. ಆದರೆ, ಇತ್ತೀಚೆಗೆ ಚುನಾವಣೆ ನಡೆಯಬೇಕಾದ ವಿಷಯಗಳ ಮೇಲೆ ನಡೆಯುತ್ತಲೇ ಇಲ್ಲ. ಅದರಲ್ಲೂ, ೨೦೨೪ರ ಚುನಾವಣೆಯಂತೂ ಬರೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೇಕಿಲ್ಲದ ವಿಷಯಗಳ ಆಧಾರದಲ್ಲಿಯೇ ನಡೆಯುತ್ತಿದೆ.

ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ, ದ್ವೇಷ ಭಾಷಣದ ಮೂಲಕ ಇಡೀ ಮುಸ್ಲಿಂ ಸಮುದಾಯದ ವಿರುದ್ಧ ಮಾತನ್ನಾಡುತ್ತಾರೆ. ದೇಶದ ಎಲ್ಲ ಸೌಲಭ್ಯಗಳು ಮೊದಲು ಮುಸ್ಲಿಂ ಸಮುದಾಯಕ್ಕೆ ಸಿಗುತ್ತದೆ ಎಂಬ ಹೇಳಿಕೆ ನೀಡಿ, ಸಂಜೆ ವೇಳೆಗೆ ಮತ್ತೊಂದು ಕಾರ್ಯಕ್ರಮದಲ್ಲಿ ಮುಸ್ಲಿಂರಿಗೆ ಹಜ್ ಯಾತ್ರೆಗೆ ಹೆಚ್ಚು ಹೆಚ್ಚು ಅವಕಾಶ ಮಾಡಿಕೊಟ್ಟಿರುವ ಕುರಿತು ಮಾತನ್ನಾಡುತ್ತಾರೆ. ಇಂತಹ ಇಬ್ಬಗೆ ನೀತಿಯಿಂದ ದ್ವೇಷ ಹರಡುವುದು ಸುಲಭವಾಗುತ್ತದೆ. ಅದನ್ನು ಸ್ವತಃ ಪ್ರಧಾನಿಯೇ ಮುಂಚೂಣಿಯಲ್ಲಿ ನಿಂತು ಮಾಡುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಅಪಾಯಕ್ಕೆ ದೂಡಿದರೆ ಆಶ್ಚರ್ಯವಿಲ್ಲ.

ಇಂತಹದ್ದೆಲ್ಲ ಮೊದಲಿಗೆ ಉತ್ತರ ಭಾರತದ ರಾಜ್ಯಗಳಿಗೆ ಸೀಮಿತವಾಗಿತ್ತು. ಇದೀಗ ಕರ್ನಾಟಕಕ್ಕೂ ಇಂತಹ ಕಿಡಿಯನ್ನು ಹೊತ್ತಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಕೊಲೆ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿದೆ. ಕೊಲೆಗಾರನ ಮನಸ್ಥಿತಿ ಕೆಟ್ಟದ್ದು, ಅವನು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಕಾನೂನಿನ ಪ್ರಕಾರ ಆಗಲೇಬೇಕು. ಆದರೆ, ಅದನ್ನು ಒಂದು ಪಕ್ಷ ತನ್ನ ರಾಜಕೀಯ ಲಾಭಕ್ಕೆ, ಒಂದು ಸಮುದಾಯದ ದ್ವೇಷಕ್ಕೆ ಬಳಸಿಕೊಳ್ಳುತ್ತಿದೆ. ಆದರೆ, ಅವರಿಬ್ಬರ ನಡುವಿನ ಪ್ರೀತಿಯನ್ನು ಎರಡು ಕುಟುಂಬಗಳು ಪರೋಕ್ಷವಾಗಿ ಒಪ್ಪಿಕೊಂಡಿವೆ.

ಆರೋಪಿಯ ತಾಯಿ ಅವನು ಪ್ರೀತಿ ಮಾಡುತ್ತಿದ್ದನ್ನು ಒಪ್ಪಿಕೊಳ್ಳುತ್ತಲೇ, ಅವನಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಕೊಲೆಯಾದ ನೇಹಾ ತಂದೆ ಆತ ಎರಡು ವರ್ಷದ ಹಿಂದೆ ತನ್ನ ಬಳಿ ಪ್ರೀತಿ ಮಾಡುವುದಾಗಿ ತಿಳಿಸಿದ್ದ, ನೀವು ಒಪ್ಪುವುದಾದರೆ, ನಿಮ್ಮ ಧರ್ಮಕ್ಕೆ ಮತಾಂತರ ಆಗುತ್ತೇನೆ ಎಂದು ಹೇಳಿದ್ದ ಎನ್ನುವ ಮೂಲಕ ಇದು ರಾಜಕೀಯಗೊಳ್ಳುತ್ತಿರುವ ರೀತಿಯ ಪ್ರಕರಣವಲ್ಲ ಎಂಬುದು ಗೊತ್ತಾಗುತ್ತದೆ.

ಆದರೆ, ಅದೇ ಪ್ರಕರಣವನ್ನಿಟ್ಟುಕೊಂಡು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದರಲ್ಲಿ ಸತ್ಯಾಸತ್ಯತೆ ಏನೇ ಇರಲಿ, ಇಂತಹ ಪ್ರಚೋಧನೆಗಳಿಂದ ಶೇ.೨೦ ರಷ್ಟು ಜನರಾದರೂ, ಒಂದು ಸಮುದಾಯದ ಸ್ವೇಷ ಮಾಡುತ್ತಾರೆ, ಅವರನ್ನು ವಿರೋಧಿಸುವ ಪಕ್ಷದ ಪರ ನಿಲ್ಲುತ್ತಾರೆ. ಇಂತಹ ಅಂಶಗಳನ್ನು ಅರ್ಥ ಮಾಡಿಕೊಂಡಿರುವ ಒಂದು ಪಕ್ಷದ ನಾಯಕರು ಅದನ್ನೇ ಅಸ್ತç ಮಾಡಿಕೊಂಡಿದ್ದಾರೆ.

ಇದರ ಜತೆಗೆ, ಆರೋಪ-ಪ್ರತ್ಯಾರೋಪಗಳಂತೂ ಅಸಹನೀಯವಾಗಿವೆ. ಪ್ರಜ್ಞಾವಂತ ಮತದಾರರು ರಆಜಕೀಯ ನಾಯಕರ ಇಂತಹ ಹೇಳಿಕೆಗಳಿಂದ ಬೇಸತ್ತಿದ್ದಾರೆ. ಆದರೆ, ಅವರಿಗಿಂತ ತಮ್ಮ ಹೇಳಿಕೆಗಳೇ ವೇದವಾಕ್ಯಗಳೆಂದು ನಂಬಿ ಕುಣಿಯುವ ಜನರೇ ತಮ್ಮ ಬಂಡವಾಳ ಎಂಬುದನ್ನು ರಾಜಕೀಯ ನಾಯಕರು ಅರ್ಥ ಮಾಡಿಕೊಂಡಿದ್ದಾರೆ.

ಇದೆಲ್ಲದಕ್ಕಿಂತ ಹೆಚ್ಚಾಗಿ, ವೃತ್ತ ಪತ್ರಿಕೆಗಳಲ್ಲಿ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಿಕ್ಕಿದ್ದು ಚೆಂಬು ಎಂದು ಜಾಹೀರಾತು ಕೊಟ್ಟರೆ, ಪಿಕ್‌ಪಾಕೇಟ್ ಸರಕಾರ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಬಜೆಪಿ ಜಾಹೀರಾತು ನೀಡಿದೆ. ಸರಕಾರ ಮಾಡಿದ ಸಾಧನೆಗಳನ್ನಷ್ಟೇ ಜಾಹೀರಾತು ಮೂಲಕ ಪ್ರಕಟಿಸಿ, ರಾಜ್ಯದ ಜನರಿಗೆ ಮಾಹಿತಿ ನೀಡುತ್ತಿದ್ದ ಸರಕಾರ ಮತ್ತು ತಮ್ಮ ಕಾಲದ ಸಾಧನೆಗಳನ್ನು ಹೊಗಳಿಕೊಳ್ಳುತ್ತಿದ್ದ ವಿಪಕ್ಷಗಳೆರಡು ಇಂತಹ ಕ್ಷÄಲ್ಲಕ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದು ವಿಪರ್ಯಾಸ. ಇದೆಲ್ಲಕ್ಕಿಂತ ಹೆಚ್ಚಾಗಿ, ಇಂತಹ ವಿವೇಕಾಹೀನ ಜಾಹೀರಾತನ್ನು ಹಣಕ್ಕಾಗಿ ಪ್ರಕಟ ಮಾಡಿದ ದಿನಪತ್ರಿಕೆಗಳ ಬುದ್ದಿ ಮಟ್ಟ ಇಷ್ಟೊಂದು ಕೆಳಕ್ಕಿಳಿದಿರುವುದು ಕೂಡ ರಾಜ್ಯದ ದೌರ್ಭಾಗ್ಯ ಎನ್ನಬಹುದು.

ರಾಜ್ಯಕ್ಕೆ ಅನುದಾನ ಕೊಡಬೇಕಿಲ್ಲವೇ ಇಲ್ಲ ಎಂದು ಕೆಲ ಸಂಸದರು ವಾದ ಮಾಡಿದ್ದರು. ಇದೀಗ ಸುಪ್ರಿಂ ಕೋರ್ಟ್ನಲ್ಲಿ ಕೇಂದ್ರ ಸರಕಾರವೇ ಅನುದಾನ ಬಾಕಿ ಇರುವುದಾಗಿ ಒಪ್ಪಿಕೊಂಡು, ಕಾಲಮಿತಿಯಲ್ಲಿ ಅನುದಾನ ಬಿಡುಗಡೆ ಮಾಡಲು ಚುನಾವಣಾ ಆಯೋಗದ ಅನುಮತಿ ಕೇಳಿರುವುದಾಗಿ ತಿಳಿಸಿದೆ.

ಇದಾಗುತ್ತಿದ್ದಂತೆ, ಸುಪ್ರಿಂ ಕೋರ್ಟ್ನ ಆದೇಶ ಕಾಂಗ್ರೆಸ್‌ಗೆ ಸಿಕ್ಕಿದ ಜಯ ಎಂದು ಕಾಂಗ್ರೆಸ್ಸಿಗರು ಬೀಗುತ್ತಿದ್ದರೆ, ಸುಪ್ರಿಂ ಕೋರ್ಟ್ ಮುಂದೆ ಒಪ್ಪಿಕೊಂಡರೂ, ಮೋದಿ ಸಾಧನೆ ಎಂಬAತೆ ಬಿಜೆಪಿ ಬಿಂಬಿಸುತ್ತಿರುವುದು ಮಾನಹೀನ ಮನಸ್ಥಿತಿಗೆ ಕನ್ನಡಿ ಎನ್ನಬಹುದು. ಹೀಗೆಲ್ಲ ರಾಜಕಾರಣ ಮಾಡುವ ಮಟ್ಟಕ್ಕೆ ಕರ್ನಾಟಕ ಬಂದಿರುವುದು ಈ ರಾಜ್ಯದ ಜನರ ದೌರ್ಭಾಗ್ಯವೇ ಸರಿ, ಮತದಾರ ಮುಂದೆಯೂ ಪಾಠ ಕಲಿಯದಿದ್ದರೆ, ಮುಂದೆ ರಾಜ್ಯದ ಜನರನ್ನೇ ದೇವರೇ ಕಾಪಾಡಬೇಕು.


Share It

You cannot copy content of this page