ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಯಲ್ಲಿಯೇ ಇದೆ ಮದ್ದು

220
Share It

ಇತ್ತೀಚಿನ ದಿನಗಳಲ್ಲಿ ಯಾರನ್ನು ಕೇಳಿದರು ಸಹ ಗ್ಯಾಸ್ಟ್ರಿಕ್ ಸಮಸ್ಯೆ ಬಗ್ಗೆ ಮಾತನಾಡುತ್ತರೆ, ಯಾರಿಗೆ ಈ ಸಮಸ್ಯೆ ಇಲ್ಲ ಎಂದು ಹೇಳುವಂತಿಲ್ಲ.

ಇಂದಿನ ಆಹಾರ ಪದ್ಧತಿ ಅಥವಾ ಬಿಡುವಿಲ್ಲದೆ ದುಡಿಯುವ ಕಾರಣಕ್ಕೆ ಅಥವಾ ಇನ್ನವುದೋ ಕಾರಣಕ್ಕೋ ಯಾರು ಸಹ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡದೆ ಇರುವುದು ಈ ಸಮಸ್ಯೆಗೆ ಕಾರಣ ಎಂದರೆ ತಪ್ಪೇನಿಲ್ಲ.

ಈ ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಯಲ್ಲಿಯೆ ಆರೋಗ್ಯಕರವಾದ ಔಷಧಿಯ ಮನೆಮದ್ದುಗಳನ್ನು ಬಳಸಬಹುದು. ಇದರಿಂದ ಯಾವುದೆ ಸೈಡ್‌ಎಫೆಕ್ಟ್ಗಳು ಇರುವುದಿಲ್ಲ, ಆರೋಗ್ಯಕ್ಕೆ ಯಾವುದೆ ಹಾನಿ ಸಹ ಆಗುವುದಿಲ್ಲ ಅವುಗಳ ಬಗ್ಗೆ ನಾವು ತಿಳಿಸುತ್ತೇವೆ.

೧) ಜೀರಿಗೆ ನೀರು(ಕುದಿಯುವ ನೀರಿಗೆ ಜೀರಿಗೆ ಚೆನ್ನಾಗಿ ಕುದಿಸಿ ಶೋಧಿಸಿ ಸ್ವಲ್ಪ ತಣ್ಣಗಾದ ಮೇಲೆ ಈ ನೀರನ್ನು ಕುಡಿಯಬಹುದು)
೨) ಶುಂಠಿ ಚಹಾ(ಕುದಿಯುವ ನೀರಿಗೆ ಶುಂಠಿ ಹಾಕಿ ಕುದಿಸಿ ಕುಡಿಯಬಹುದು ಅಥವಾ ನೀವು ಚಹಾ ಕುಡಿವವರಾಗಿದ್ದಾರೆ ನೀವು ಚಹಾ ಕುಡಿವಾಗೆಲ್ಲ ಚಹಾಗೆ ಸ್ವಲ್ಪ ಶುಂಠಿಯನ್ನು ಸೇರಿಸಿ ಕುಡಿಯುವುದು ಇನ್ನು ಉತ್ತಮ).
೩) ಓಮಕಾಳಿನ ನೀರು(ಕುದಿಯುವ ನೀರಿನಲ್ಲಿ ಓಮಕಾಳನ್ನು ಸೇರಿಸಿ ಕುದಿಸಿ ಕುಡಿಯಬಹುದು ಅಥವಾ ಚಹಾ ಜತೆಗೆ ಸಹ ಸೇರಿಸಿ ಕುಡಿಯಬಹದು, ಬೆಳ್ಳೆಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಳ್ಳೆಯದು).
೪) ಸೋಂಪು(ಇದನ್ನು ಚಹಾ ರೂಪದಲ್ಲಿ ಸೇವಿಸಬಹದು ಮತ್ತು ಊಟದ ಬಳಿಕ ಸ್ವಲ್ಪ ಸೋಂಪನ್ನು ಜಗಿದು ತಿನ್ನಬಹುದು)
೫) ಕೊತ್ತಂಬರಿ ಬೀಜದ ನೀರು( ಕುಡಿಯುವ ನೀರಿನಲ್ಲಿ ಕೊತ್ತಂಬರಿ ಬೀಜವನ್ನು ಸರಿಯಾಗಿ ಕುದಿಸಿ ನೀರು ತಣ್ಣಗಾದ ನಂತರ ಸ್ವಲ್ಪ ಬೆಚ್ಚಗಿರುವಾಗ ಸೇವಿಸಬಹುದು ಅಥವಾ ನಿಮಗೆ ಎಷ್ಟು ಪ್ರಮಾಣದಲ್ಲಿ ಬಿಸಿ ಇದ್ದರೆ ಒಳ್ಳೆಯದು ಆ ಪ್ರಮಾಣದಲ್ಲಿ ಬಿಸಿ ಇರುವಾಗ ನೀರನ್ನು ಸೇವಿಸಬಹದು)
೬) ಪುದೀನಾ ಚಹಾ(ಪುದಿನಾ ಎಲೆಯನ್ನು ತೊಳೆದು ಕುದಿಯುವ ನೋರಿನಲ್ಲಿ ಚೆನ್ನಾಗಿ ಕುದಿಸಿ ಎಷ್ಟು ಪ್ರಮಾಣದಲ್ಲಿ ಬಿಸಿ ಇದ್ದರೆ ನಿಮೆ ಅನುಕೂಲ ಎನ್ನಿಸುವುದು ಆ ಪ್ರಮಾಣದ ನೀರನ್ನು ಕುಡಿಯಹುದು)
೭) ಇಂಗು ನೀರು( ಇಂಗನ್ನು ತಣ್ಣಗಿರುವ ನೀರು ಅಥವಾ ಬಿಸಿ ನೀರು ಅಥವಾ ಉಗುರು ಬೆಚ್ಚಗಿನ ನೀರಿಗೆ ಚಿಟಕಿ ಪ್ರಮಾಣದಷ್ಟು ಇಂಗನ್ನು ಸೇರಿಸಿ ಕುಡಿಯಬಹುದು)

ಈ ಮನೆಮದ್ದುಗಳನ್ನು ಉಪಯೋಗಿಸಿಕೊಂಡು ನಾವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಈ ಮನೆ ಮದ್ದುಗಳು ಆರೋಗ್ಯಕ್ಕೂ ಒಳ್ಳಯದು ಮತ್ತು ದೇಹಕ್ಕು ಒಳ್ಳೆಯದು ಸಂಶಯವಿಲ್ಲದೆ ಉಪಯೋಗಿಸಬಹಿದಾಗಿದೆ. ಇದಕ್ಕೂ ಮೀರಿ ಗ್ಯಾಸ್ಟ್ರಿಕ್ ಸಮಸ್ಯೆ ಬಗೆಹರಿಯದಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.


Share It

You cannot copy content of this page