ಅಪರಾಧ ರಾಜಕೀಯ ಸುದ್ದಿ

ಹುಬ್ಬಳ್ಳಿ ಯುವತಿ ಕೊಲೆ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಬಂಧನ

Share It

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಗೆ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಬೆಳಗಿನ ಜಾವ ೫.೩೦ ಸುಮಾರಿನಲ್ಲಿ ಅಂಜಲಿ ಅಂಬಿಗೇರ ಮನೆಗೆ ಆಗಮಿಸಿದ್ದ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಎಂಬಾತ, ಆಕೆಯನ್ನು ಮೈಸೂರಿಗೆ ಬರುವಂತೆ ಕರೆದಿದ್ದ, ಆಕೆ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಹೊಟ್ಟೆ, ಎದೆ ಮತ್ತು ಕುತ್ತಿಗೆಯ ಭಾಗಕ್ಕೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ.

ಕೊಲೆಯ ನಂತರ ಹುಬ್ಬಳ್ಳಿ ನಗರದಲ್ಲಿ ಬೃಹತ್ ಪ್ರತಿಭಟನೆಗಳೇ ನಡೆದು ಹೋಗಿತ್ತು. ಇತ್ತೀಚೆಗಷ್ಟೇ ನೇಹಾ ಹಿರೇಮಠ್ ಕೊಲೆ ನಡೆದಿದ್ದು, ಇದೀಗ ಮತ್ತೊಬ್ಬ ಯುವತಿಯ ಕೊಲೆ ನಡೆದಿದೆ. ಇದು ಪೊಲೀಸ್ ವೈಫಲ್ಯ ಎಂದು ವಿಪಕ್ಷ ಬಿಜೆಪಿ ಟೀಕೆ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿತ್ತು.

ಈ ನಡುವೆ ಅಂಜಲಿ ಕುಟುಂಬ ಈ ಹಿಂದೆಯೇ ದೂರು ನೀಡಲು ಬಂದಿದಾಗ ಬೆಂಡಗೇರಿ ಪೊಲೀಸ್ ಠಾಣೆ ಪೊಳಿಸರು ದೂರು ಪಡೆಯದೆ, ಕರ್ತವ್ಯ ಲೋಪ ಎಸಗಿದ್ದು, ಕಂಡುಬAದಿದ್ದು, ಇನ್ಸ್ಪೆಕ್ಟರ್ ಮತ್ತು ಮಹಿಳಾ ಕಾನ್ಸೆ÷್ಟÃಬಲ್ ಅಮಾನತು ಮಾಡಲಾಗಿತ್ತು. ಆರೋಪಿಯ ಪತ್ತೆಗೆ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ, ಕಾರ್ಯಾಚರಣೆ ನಡೆಸಲಾಗಿತ್ತು.

ಇದೀಗ ಈ ತಂಡಗಳು ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಎಂಬಾತನ್ನು ಬಂದಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಖಚಿತಪಡಿಸಿದ್ದಾರೆ.


Share It

You cannot copy content of this page