ರಾಜಕೀಯ ಸುದ್ದಿ

ಯಾವ ಜಿಲ್ಲೆಯಲ್ಲಿ ಎಷ್ಟಾಯ್ತು ಮತದಾನ? ಇಲ್ಲಿದೆ ಮಾಹಿತಿ

Share It

ಮಂಡ್ಯ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 7.70 ರಷ್ಟು ಮತದಾನವಾಗಿದೆ.
ಹಾಸನದಲ್ಲಿ ಬೆಳಗ್ಗೆ 7 ರಿಂದ 9 ಗಂಟೆವರೆಗೆ ಶೇಕಡಾ 8.2ರಷ್ಟು ಮತದಾನವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಮತದಾನ ಬೆಳಗ್ಗೆ 9 ಗಂಟೆಗೆ ಶೇ 8.70 ರಷ್ಟು ಮತದಾನವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 12.75ರಷ್ಟು ಮತದಾನ‌ವಾಗಿದೆ
.

ಮಂಗಳೂರು: ಮತ ಯಂತ್ರದಲ್ಲಿ ದೋಷ; ಮತದಾನಕ್ಕೆ ಅಡಚಣೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಎಂಬಲ್ಲಿ ಮತ ಯಂತ್ರದಲ್ಲಿ ದೋಷಕಂಡುಬಂದು ಮತದಾನಕ್ಕೆ ಅಡಚಣೆಯಾಯಿತು. ಬೂತ್ ಸಂಖ್ಯೆ 240 ಪದ್ಯಾಣ ಕರೋಪಡಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿದೆ. ಮತಯಂತ್ರದಲ್ಲಿರುವ ಒಂದು ಬಟನ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಮತದಾನಕ್ಕೆ ಅಡ್ಡಿಯಾಯಾಯಿತು. ಸದ್ಯ ಮತಯಂತ್ರ ಸರಿಪಡಿಸಿ ಮತದಾನ ಆರಂಭವಾಗಿದೆ.

ಹಾಸನ; ಇವಿಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತ
ಹಾಸನ ನಗರದ ಸಂತೇಪೇಟೆಯ ಶಾಲೆಯ ಮತಗಟ್ಟೆ ಸಂಖ್ಯೆ 189 ರಲ್ಲಿ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡಿದೆ. ಯಂತ್ರ ಸ್ಥಗಿತಗೊಂಡು ಒಂದು ಗಂಟೆ ಕಳೆದರೂ ಮತಯಂತ್ರ ಸರಿಯಾಗಿಲ್ಲ ಎಂದು ಮತದಾರರು ಆರೋಪಿಸಿದ್ದಾರೆ.


Share It

You cannot copy content of this page