ರಾಜಕೀಯ ಸಿನಿಮಾ ಸುದ್ದಿ

ನಟಿ ಅಮೂಲ್ಯ ಮಾವ-ಬಿಜೆಪಿ ಮುಖಂಡನ ಮನೆಯಲ್ಲಿ 31 ಲೀಟರ್ ಮದ್ಯ ವಶ

Share It

ಸ್ಯಾಂಡಲ್ ವುಡ್ ಮಾಜಿ ನಟಿ ಅಮೂಲ್ಯ ಅವರ ಮಾವ ಹಾಗೂ ಬಿಜೆಪಿ ಮುಖಂಡ ರಾಮಚಂದ್ರ ಅವರ ನಿವಾಸದ ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು 31 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯರಾಗಿರುವ ರಾಮಚಂದ್ರ ಅವರ ನಿವಾಸದ ಮೇಲೆ ಬುಧವಾರ ರಾತ್ರಿ ದಾಳಿ 10 ವಾಹನಗಳಲ್ಲಿ ಬಂದ 30ಕ್ಕೂ ಹೆಚ್ಚು ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯ ವಶಪಡಿಸಿಕೊಂಡಿದ್ದಾರೆ.

ಚುನಾವಣಾಧಿಕಾರಿಗಳ ಈ ದಾಳಿಗೆ ಆಕ್ರೋಶ ವ್ಯಕ್ತಪಡಿಸಿರುವ ರಾಮಚಂದ್ರ, ಅಧಿಕಾರ ದುರುಪಯೋಗಪಡಿಸಿಕೊಂಡ ಕಾಂಗ್ರೆಸ್ ಮನೆ ಮೇಲೆ ದಾಳಿ ಮಾಡಿಸಿದ್ದಾರೆ. ಕಾಂಗ್ರೆಸ್‌ ಈ ಭಾಗದಲ್ಲಿ ಹಣವನ್ನು ಹಂಚಿಕೆ ಮಾಡುತ್ತಿತ್ತು. ಅದಕ್ಕೆ ನಾವು ಅಡ್ಡಿಪಡಿಸುತ್ತೇವೆ ಎಂದು ನಮ್ಮ ಮನೆ ಮೇಲೆ‌ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.

ದಾಳಿ ವೇಳೆ ಆರ್‌ಓಗೆ ಪದೇ ಪದೇ ಪೋನ್ ಬರುತಿತ್ತು. ಅವರನ್ನು ಎರಡು ದಿನ ಒಳಗಡೆ ಹಾಕಿಸಿ ಎಂದು ಫೋನಿನಲ್ಲಿ ಇದ್ದ ವ್ಯಕ್ತಿ ಹೇಳುತ್ತಿದ್ದರು. ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ಮದ್ಯ ತರಿಸಿದ್ದೆ. ‌‌ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಆಚರಿಸಬಾರದು ಎಂದು ಸುಮ್ಮನೆ ಆಗಿದ್ದೆವು. ಈ ಭಾಗದಲ್ಲಿ ಬಿಜೆಪಿಗೆ 18 ಸಾವಿರ ಮುನ್ನಡೆ ಬರುತ್ತದೆ. ಇದನ್ನು ಸಹಿಸಲಾಗದೆ ತಮ್ಮನ್ನು ಚುನಾವಣೆ ವೇಳೆ ಹತ್ತಿಕ್ಕಲು ಆಡಳಿತ ಪಕ್ಷದ ವಿರೋಧಿಗಳು ಅಧಿಕಾರವನ್ನು ದುರ್ಬಳಕೆ ಮಾಡಿದ್ದಾರೆ ಎಂದು ರಾಮಚಂದ್ರ ಆರೋಪಿಸಿದ್ದಾರೆ.


Share It

You cannot copy content of this page