ಲಕ್ನೋ: ಐಪಿಎಲ್‌ನ ನಿರ್ಣಾಯಕ ಪಂದ್ಯದಲ್ಲಿ ಹೀನಾಯವಾಗಿ ಸೋತ ಲಕ್ನೋ ತಂಡದ ನಾಯಕ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಲಕ್ನೋ ಸೂಪರ್ ಜೆಂಟ್ಸ್ ತಂಡ ಮಾಲೀಕ ಮೈದಾನದಲ್ಲಿಯೇ ಅವಮಾನಿಸಿದ ಘಟನೆ ನಡೆದಿದೆ.
ಮಂಗಳವಾರ ನಡೆದ ಲಕ್ನೋ ಸೂಪರ್ ಜೆಂಟ್ಸ್ ಮತ್ತು ಹೈದರಾಬಾದ್ ಸನ್ ರೈಸರ‍್ಸ್ ನಡುವಿನ ಪಂದ್ಯದಲ್ಲಿ ಲಕ್ನೋ ತಂಡ 165 ರನ್‌ಗಳನ್ನು ಗಳಿಸಿಯೂ ಹೀನಾಯವಾಗಿ ಸೋಲು ಕಂಡಿದೆ. ಹೈದರಾಬಾದ್ ತಂಡ ಕೇವಲ 9.4 ಓವರ್‌ಗಳಲ್ಲೇ ಆ ಮೊತ್ತವನ್ನು ಬೆನ್ನತ್ತಿ ಗೆಲುವು ಸಾಧಿಸಿದೆ.
ಈ ಪಂದ್ಯದ ಸೋಲಿನಿಂದಾಗಿ ಲಕ್ನೋ ತಂಡದ ಪ್ಲೇ ಆಪ್ ಕನಸು ಬಹುತೇಕ ನುಚ್ಚು ನೂರಾದಂತಾಗಿದೆ. ಪಂದ್ಯ ಮುಗಿಯುತ್ತಿದ್ದಂತೆ ಮೈದಾನದಲ್ಲಿಯೇ ಇದ್ದ ತಂಡದ ಮಾಲೀಕ ಸಂಜೀವ್ ಗೋಯಾಂಕ್ ಅವರು, ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ತಾಳ್ಮೆಯಿಂದಲೇ ವರ್ತಿಸುತ್ತಿದ್ದಾರಾದರೂ, ಸಂಜೀವ್ ಅವರ ತಾಳ್ಮೆಯ ಕಟ್ಟೆಯೊಡೆದಿರುವ ವಿಡಿಯೋ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಸಂಜೀವ್ ವಿರುದ್ಧ ನೆಟ್ಟಿಗರು ಮುಗಿಬಿದ್ದಿದ್ದಾರೆ. ಸಂಜೀವ್ ಅವರು, ಕ್ರಿಕೆಟ್ ಅನ್ನು ಕಾರ್ಪೋರೇಟ್ ಜಾಬ್ ಎಂದುಕೊAಡಿದ್ದಾರೆ. ಕ್ರಿಕೆಟ್ ಮಹತ್ವ ಗೊತ್ತಿಲ್ಲದ ದುಡ್ಡು ಮಾಡುವ ಸಲುವಾಗಿ ಐಪಿಎಲ್ ತಂಡ ಖರೀದಿಸುವ ಇಂತಹ ಕಾರ್ಪೋರೇಟ್ ಕುಳಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಗುಡುಗಿದ್ದಾರೆ.
ಕ್ರಿಕೆಟ್ ಸೋಲು-ಗೆಲುವುಗಳನ್ನು ಮೀರಿದ ಒಂದು ಕ್ರೀಡೆ. ಎಲ್ಲ ತಂಡಗಳು ಗೆಲುವಿಗಾಗಿಯೇ ಆಡುತ್ತವೆ. ಆದರೆ, ಯಾರಾದರೊಬ್ಬರು ಸಓಲಲೇಬೇಕು. ಇಂತಹ ಸೋಲನ್ನು ಸಹಜವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲದ ಮಾಲೀಕನೊಬ್ಬ, ಒಬ್ಬ ಸ್ಟಾರ್ ಆಟಗಾರನನ್ನು ಸಾರ್ವಜನಿಕವಾಗಿ ನಿಂದಿಸಿರುವುದು ಸರಿಯಲ್ಲ ಎಂಬುದು ಬಹುತೇಕ ಕ್ರಿಕೆಟ್ ಅಭಿಮಾನಿಗಳ ಅಭಿಮತ.
ಈ ನಡುವೆ ಕ್ರಿಕೆಟ್ ಅಭಿಮಾನಿಗಳು ಮತ್ತು ಆರ್‌ಸಿಬಿ ಅಭಿಮಾನಿಗಳು ಕನ್ನಡಿಗನಿಗಾದ ಅವಮಾನದ ವಿರುದ್ಧ ಸಿಡಿದೆದಿದ್ದಿದ್ದಾರೆ. ಸಂಜೀವ್ ಅವರನ್ನು ತರೇಹವಾರಿ ಟೀಕೆ ಮಾಡಿದ್ದಾರೆ. ಜತೆಗೆ, ಕನ್ನಡಿಗ ರಾಹುಲ್ ಮುಂದಿನ ವರ್ಷದಿಂದ ಆರ್‌ಸಿಬಿಯಲ್ಲೇ ಆಡಲಿ, ಹಣ ಕಡಿಮೆಯಾದರೂ ಪರವಾಗಿಲ್ಲ, ಅಭಿಮಾನ ಇರುತ್ತದೆ. ಮೊದಲು ಅಲ್ಲಿಂದ ಆಚೆ ಬಾ ರಾಹುಲ್ ಎಂದು ಅನೇಕರು ಟ್ವಿಟ್ ಮಾಡಿದ್ದಾರೆ. ಈ ಬಗ್ಗೆ ಲಕ್ನೋ ತಂಡದ ಆಡಳಿತ ಮಂಡಳಿಯಾಗಲೀ, ರಾಹುಲ್ ಆಗಲೀ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ.