ಬೆಂಗಳೂರು: ವೈಟ್ ಪೇಪರ್ ಡಿಜಿಟಲ್ ಮೀಡಿಯಾ ಸಂಸ್ಥೆಯ 5ನೇ ವಾರ್ಷಿಕೋತ್ಸವ ಸಮಾರಂಭವನ್ನು ಬೆಂಗಳೂರಿನ ನಯನ ಸಭಾಂಗಣದಲ್ಲಿ ಆಚರಣೆ ಮಾಡಡಲಾಯಿತು.
ಸಮಾರಂಭದಲ್ಲಿ ಅನೇಕ ಗಣ್ಯರು ಭಾಗವಹಿಸಿ, ಸಂಸ್ಥೆಯ ಕಾರ್ಯವೈಖರಿಗಳನ್ನು ಶ್ಲಾಘಿಸಿದರು. ಮೀಡಿಯಾದ ಇತಿಮಿತಿಗಳನ್ನು ಚರ್ಚಿಸಿ ವೈಟ್ ಪೇಪರ್ ಬೆಳವಣಿಗೆಗೆ ಹಾರೈಸಿದರು.

ಸಮಾರಂಭದಲ್ಲಿ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ ಅವರಿಗೆ ಬಯಲು ಸೀಮೆಗೆ ಹೇಮೆ ಹರಿಸಿದ ಬೆಳಗೊಳದ ಭಗೀರಥ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ವೈಟ್ ಪೇಪರ್ ಸಂಸ್ಥೆಯಿಂದ ಸನ್ಮಾನಿತರಾದ ಕುರಿತು ಕೃತಜ್ಞತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಪರಿಷತ್ ಸದಸ್ಯ ಡಿಎಸ್ ವೀರಯ್ಯ, ನಿವೃತ್ತ ಡಿಸಿಪಿ ಸಿದ್ದರಾಜು, ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕರಾದ ಡಾ. ಶಿವಕುಮಾರ್ ಮತ್ತು ಡಾ. ರಾಮಕೃಷ್ಣಯ್ಯ ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ನಾಲೆಜ್ಡ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಅಂತೆಯೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚೇತನ್ ಅಹಿಂಸಾ, ಧಮ್ಮವೀರ ಭಂತೇಜಿ, ಗ್ರಾಮ್ಯಾಕ್ಸ್ ಕಂಪನಿ ವ್ಯವಸ್ಥಾಪಕರಾದ ದೊಡ್ಡಸ್ವಾಮಿ, ಸಮಾಜಸೇವಕರಾದ ಶ್ರೀನಿವಾಸ್ ರೆಡ್ಡಿ ಸೇರಿ ಭಾಗವಹಿಸಿದ್ದರು.


