ರಾಜಕೀಯ ಸುದ್ದಿ

ಸಿದ್ದು ಲವ್ ರಿಜೆಕ್ಟ್ ಮಾಡಿದ್ದ ಆಕೆ ಯಾರು?

Share It

ಮೈಸೂರು: ಸಿದ್ದರಾಮಯ್ಯ ಇಟರ್‌ಕ್ಯಾಸ್ಟ್ ಮ್ಯಾರೇಜ್ ಆಗ್ಬೇಕು ಅನ್ನೋ ಆಸೆ ಇಟ್ಕೊಂಡು, ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿದ್ರಂತೆ, ಆದ್ರೆ, ಆಕೆ ನೋ ಅನ್ನೋ ಮೂಲಕ ಸಿದ್ರಾಮಯ್ಯ ಅವ್ರ ಆಸೆಗೆ ತಣ್ಣಿ ಹಾಕಿದ್ರಂತೆ !

ಇದು ಸ್ವತಃ ಸಿಎಂ ಸಿದ್ರಾಮಯ್ಯ ಅವ್ರೇ ಹೇಳಿಕೊಂಡ ಹಳೇಯ ಲವ್ ಸ್ಟೋರಿ. ನೆನ್ನೆ ಮೈಸೂರಿನಲ್ಲಿ ಇಂಟರ್ ಕ್ಯಾಸ್ಟ್ ಮ್ಯಾರೇಜ್ ಆದವರಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತಾಡಿದ ಅವ್ರು, ಎಲ್ಲೆಲ್ಬಿ ಮಾಡುವಾಗ ನಂಗೂ ಒಂದ್ ಲವ್ ಸಟೋರಿ ಇತ್ತು. ನಾನು ಕೂಡ ಇಂಟರ್ ಕ್ಯಾಸ್ಟ್ ಮ್ಯಾರೇಜ್ ಮಾಡ್ಕೋಬೇಕು ಅಂದ್ಕAಡಿದ್ದೆ. ಆದ್ರೆ, ಹುಡ್ಗಿನೇ ಒಪ್ಪಿಲ್ಲ ಅಂತ ಹೇಳಿದ್ರು.

ಸಿದ್ರಾಮಯ್ಯನ ಸ್ಟೇಟ್ಮೆಂಟ್ ನಂತ್ರ, ಇದೀಗ ಕಾಡ್ತಾ ಇರೋ ಪ್ರಶ್ನೇ ಏನಪ್ಪ ಅಂದ್ರೆ, ಸಿದ್ರಾಮಯ್ಯನ್ನ ರಿಜೆಕ್ಟ್ ಮಾಡಿದ ಆ ಹುಡ್ಗಿ ಯಾರು? ಈಗ ಆಕೆ ಇದೆಲ್ಲ ನೋಡ್ತಾ ಇದ್ರೆ ಸಿದ್ರಾಮಯ್ಯನ್ ರಿಜೆಕ್ಟ್ ಮಾಡಿದ್ಕೆ, ಪಶ್ಚಾತ್ತಾಪ ಪಟ್ಕೋತ್ತಾ ರ‍್ತಾರಲ್ವಾ? ಎಂಬೆಲ್ಲ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಸಣ್ಣ ಜೋಕ್ ಆಗಿ ಹರಿದಾಡ್ತಿವೆ.

ಹೌದು, ಎಲ್ರಿಗೂ ಒಂದ್ ಪ್ಲಾಶ್ ಬ್ಯಾಕ್ ಇದ್ದೇ ಇರುತ್ತೆ, ಅವ್ರು ಎಷ್ಟೇ ದೊಡ್ಡವರಾದ್ರೂ ಅವ್ರಿಗೆ ಇಂತಹದ್ದೆಲ್ಲ ಆಗಿರುತ್ತೆ. ಅಂದಿನ ಸ್ಥಿತಿಯಲ್ಲಿ ಜಾತಿ ಮೀರಿ ಮದ್ವೆ ಆಗೋ ಭಯಕ್ಕೋ, ಸಿದ್ರಾಮಯ್ಯ ಇನ್ನೂ ಸೆಟ್ಲಾಗಿಲ್ಲಾ ಯಾಕ್ ಬೇಕು ಅಂತ್ಲೋ, ಆಕೆ ಇವ್ರನ್ನ ರಿಜೆಕ್ಟ್ ಮಾಡಿದ್ರು. ಈಗ ಸಿದ್ರಾಮಯ್ಯ ರಾಜ್ಯದ ಸಿಎಮ್ಮಾಗವ್ರೆ, ಆಕೆಗೆ ಬೇಸ್ರ ಅಂತು ಆಗಿರುತ್ತೆ. ಜತೆಗೆ ನನ್ನ ಜತೆ ಓದಿದೋವ್ನು ಸಿಎಮ್ಮಾಗವ್ನೆ ಅಂತ ಖುಷೀನು ಆಗಿರುತ್ತೆ ಅಲ್ವಾ?

ಒಟ್ನಲ್ಲಿ ಸಿದ್ರಾಮಯ್ಯ ಅವ್ರು, ತಮ್ಮ ಹಳೆಯ ಲವ್ ಸ್ಟೋರಿ, ಅದ್ರಲ್ಲೂ ಇಂಟರ್ ಕ್ಯಾಸ್ಟ್ ಲವ್ ಸ್ಟೋರಿ ನೆನಪ್ ಮಾಡ್ಕಂಡು, ಒಂದ್ ಹೊಸ ಚರ್ಚೆಯನ್ನಂತೂ ಹುಟ್ಟು ಹಾಕಿದ್ದಾರೆ. ಎಲ್ರೋ ಹಿಂಗೆ ಹೇಳೋದು, ಆದ್ರೆ ಯಾರೂ ಇಂಟರ್ ಕ್ಯಾಸ್ಟ್ ಮ್ಯಾರೇಜ್ ಮಾಡ್ಕಂಡು ಸಮಾಜನಾ ಎದ್ರು ಹಾಕೊಳ್ಳಲ್ಲ, ವಯಸ್ಸಾದ್ಮೇಲೆ, ನಾನು ಆಗ್ಬೋದಿತ್ತು, ಆದ್ರೆ ಹಿಂಗಾಗಿತ್ತು ಅಂತಾರೆ. ಸಮಾಜ ಎದ್ರಾಕೊಂಡು ಮದ್ವೆ ಮಾಡ್ಕೊಂಡು, ಅದನ್ನು ಅನುಭವಿಸೋದು, ಇಂಟರ್ ಕ್ಯಾಸ್ಟ್ ಮ್ಯಾರೇಜ್ ಮಾಡ್ಕೊಂರಿರರ‍್ಗೆ ಗೊತ್ತು ಅಂತ ಕೆಲವ್ರು ಸೋಷಿಯಲ್ ಮೀಡಿಯಗಳಲ್ಲಿ ಗೋಳ ತೋಡ್ಕಂಡಿದ್ದಾರೆ.

ಇನ್ನು ಕೆಲವ್ರು ಇಂಟರ್ ಕ್ಯಾಸ್ಟ್ ಮ್ಯಾರೇಜ್‌ಗಳು ಜಾಸ್ತಿ ಆಗ್ಬೇಕು, ಆಗ ಸಮಾಜ ಉದ್ಧಾರ ಆಯ್ತದೆ. ಇದಕ್ಕೆ ಸಿದ್ರಾಮಯ್ಯನಂತಹ ಮನಸ್ಥಿತಿ ಇರೋವ್ರು ಸಪೋರ್ಟ್ ಮಾಡ್ಬೇಕು. ಈಗ ಯರ‍್ಯಾರ್ ಇಂಟರ್‌ಕ್ಯಾಸ್ಟ್ ಮ್ಯಾರೇಜ್ ಮಾಡ್ಕೊಂಡಿದ್ದಾರೋ ಅವ್ರಿಗೆಲ್ಲ ಒಂದ್ ಒಳ್ಳೆ ಬದ್ಕು ಸಿಗೋ ಥರ ಸರಕಾರ ವ್ಯವಸ್ಥೆ ಮಾಡ್ಕೊಡ್ಲಿ, ಆಗ ಇಂರ‍್ಕಾö್ಯಸ್ಟ್ ಮ್ಯಾರೇಜ್ ಮಾಡ್ಕೊಳ್ಳೋರ್ ಸಂಖ್ಯೆನೂ ಜಾಸ್ತಿ ಆಯ್ತದೆ ಅಂತ ಹರಿಸಿದ್ದಾರೆ.


Share It

You cannot copy content of this page