ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಪೋಸ್ಟ್ ಮಾಡಿದ್ದ ಕೊಪ್ಪ ಮೂಲದ ವ್ಯಕ್ತಿಯನ್ನು ಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾತಲಾಣದಲ್ಲಿ ಅಗ್ಸರ್ ಕೊಪ್ಪ ಎಂಬಾತ ಪಾಕಿಸ್ತಾನ್ ಜಿಂದಾಬಾದ್ ಜಿಂದಾಬಾದ್ ಎಂದು ಕನ್ನಡದಲ್ಲಿಯೇ ಪೋಸ್ಟ್ ಮಾಡಿದ್ದ. ಅನಂತರ ಮೋದಿ ವಿರುದ್ಧವೂ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದ. ಈ ಪೋಸ್ಟ್ ವೈರಲ್ ಆಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಆಕ್ರೋಶ ಹೆಚ್ಚಿಸಿತ್ತು.
ದೇಶದ್ರೋಹದ ನಡೆಯನ್ನು ಖಂಡಿಸಿ, ನೂರಾರು ನೆಟ್ಟಿಗರು ಪೋಸ್ಟ್ ಮಾಡಿದ್ದರು. ಸಾರ್ವಜನಿಕ ಆಕ್ರೋಶ ಜೋರಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೊಪ್ಪ ಪೊಲೀಸರು, ಅಗ್ಸರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಆತ ಕೊಪ್ಪ ಭಜರಂಗ ದಳದ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿ ಪೋಸ್ಟ್ ಮಾಡಿದ್ದ, ಇದೀಗ ಪೊಲೀಸರು ಆತನ ಪಾಕಿಸ್ತಾನ ಪ್ರೇಮದ ಕುರಿತು ತನಿಖೆ ಆರಂಭಿಸಿದ್ದಾರೆ.