ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಫಾರ್ಮ್ ಹೌಸ್‌ವೊಂದರಲ್ಲಿ ನಡೆದ ರೇವ್ ಪಾರ್ಟಿ ಬಗ್ಗೆ ಯಾವುದೇ ಮಾಹಿತಿಯಿಲ್ಲದಂತೆ ನಡೆದುಕೊಂಡ ಹೆಬ್ಬಗೋಡಿ ಠಾಣೆಯ ಮೂವರು ಪೊಲೀಸರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್ ಪಾರ್ಮ್ಹೌಸ್‌ನ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ಆಂಧ್ರದಿಂದ ಬಂದಿದ್ದ ಅನೇಕ ನಟನಟಿಯರು ಭಾಗವಹಿಸಿದ್ದರು. ಸಿಸಿಬಿ ಪೊಲೀಸರು ದಾಳಿ ನಡೆಸಿ ಡ್ರಗ್ಸ್, ಚೆರಸ್, ಗಾಂಜಾ ವಶಪಡಿಸಿಕೊಂಡಿದ್ದರು.
ಪಾರ್ಟಿಯಲ್ಲಿ ಭಾಗವಹಿಸಿದ್ದ 103 ಜನರ ರಕ್ತದ ಮಾದರಿ ಪರೀಕ್ಷೆ ಮಾಡಿದ್ದು, ಅದರಲ್ಲಿ 87 ಜನ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ. ಡ್ರಗ್ಸ್ ಪೆಡ್ಲರ್‌ಗಳು ರಿ 18 ಜನರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಪಾರ್ಟಿಯ ವಿಡಿಯೋವನ್ನು ಸಿಸಿಬಿ ವಶಕ್ಕೆ ಪಡೆತೆದುಕೊಂಡಿದೆ. ಆಯೋಜಕರ ವಿಚಾರಣೆ ನಡೆಯುತ್ತಿದೆ.
ಸಿಸಿಬಿ ದಾಳಿ ನಡೆದರೂ, ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಇರಲಿಲ್ಲವೇ? ಎಂಬ ಅನುಮಾನ ಕಾಡುವುದು ಸಹಜ. ಹೀಗಾಗಿ, ಕರ್ತವ್ಯಲೋಪ ಎಂದು ಪರಿಗಣಿಸಿ, ಹೆಬ್ಬಗೋಡಿ ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಬೆಂಗಳೂರು ಗ್ರಾಮಾಂತರ ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ ಸಸ್ಪೆಮಡ್ ಮಾಡಿ ಆದೇಶ ಮಾಡಿದ್ದಾರೆ.