ಬೆಂಗಳೂರು: ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಧ್ಯಮಗಳು ಪದೇಪದೆ “ಹಾಸನದ ರಾಸಲೀಲೆ” ಎಂಬ ಹೆಸರು ಬಳಸುತ್ತಿದ್ದು, ಪ್ರಜ್ವಲ್ ಮಾಡಿದ ತಪ್ಪಿಗೆ ಇಡೀ ಜಿಲ್ಲೆಯ ಜನರೇಕೆ ತಲೆತಗ್ಗಿಸಬೇಕು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಫುಲ್ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಹಾಸನದ ರಾಸಲೀಲೆ, ಹಾಸನ ಪೆನ್‌ಡ್ರೆöÊವ್ ಎಂಬುದಾಗಿ ಚರ್ಚೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಹಾಸನದ ಸಂಸದರೇ ಆಗಿದ್ದರೂ, ಇಡೀ ಹಾಸನದ ಜನತೆಗೆ ಅವಮಾನವಾಗುವ ರೀತಿಯಲ್ಲಿ ಬಿಂಬಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಈ ನಡುವೆ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೆöÊವ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೆಸರು ಪದೇಪದೆ ಬಳಸದಂತೆ ನ್ಯಾಯಾಲಯ ಸೂಚನೆ ನೀಡಿದೆ. ಪೆನ್ಡೆçöÊವ್ ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ, ಬಹುತೇಕ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರನ್ನು ಅನೇಕರು ಬಳಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರ ಹೆಸರು ಬಳಕೆಗೆ ತಡೆ ನೀಡಿದೆ. ಅದೇ ರೀತಿ ಹಾಸನ ಕುರಿತು ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಇದೇ ರೀತಿ, ಆಕೆ ಹೆಸರಿಗೆ ಕುಂದಾಪುರ ಎಂಬ ಪದ ಬಳಕೆ ಮಾಡಬಾರದು ಎಂದು ಕೆಲವರು ನ್ಯಾಯಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಪ್ರಕರಣದ ಸಂಬAಧ ಕುಂದಾಪುರ ಪದ ಬಳಸದಂತೆ ಸೂಚನೆ ನೀಡಿತ್ತು. ಇದೀಗ ಪ್ರಜ್ವಲ್ ರೇವಣ್ಣ, ರೇವಣ್ಣ ಮಾಡಿದ ತಪ್ಪಿಗೆ ಮಾಜಿ ಪ್ರಧಾನಿ, ದೇವೇಗೌಡರ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರನ್ನು ಬಳಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅದೇ ರೀತಿ ಹಾಸನದ ರಾಸಲೀಲೆ, ಹಾಸನದ ಪೆನ್ ಡ್ರೆöÊವ್ ಎಂಬ ಪದ ಬಳಕೆಯೂ ಸಲ್ಲದೂ ಎಂದು ಸಾಮಾಜಿಕ ಜಾಲತಾಣದಲ್ಲಿ ಹೋರಾಟ ಆರಂಭವಾಗಿದೆ. ಸ್ವಯಂಪ್ರೇರಿತವಾಗಿ ಇಂತಹ ಪದಬಳಕೆಯನ್ನು ಮಾಧ್ಯಮಗಳು ಮತ್ತಿತರ ಸಾಮಾಜಿಕ ಜಾಲತಾಣಿಗರ ಬಳಸುವುದನ್ನು ನಿಲ್ಲಿಸಿದ್ದರೆ, ಕಾನೂನು ಮೂಲಕವೇ ಹೋರಾಟ ಮಾಡಿ, ತಡೆಯಾಜ್ಞೆ ತರುವ ಕುರಿತು ಚಿಂತಿಸುತ್ತಿರುವುದಾಗಿ ಕೆಲವು ನೆಟ್ಟಗರು ಅಭಿಪ್ರಾಯಪಟ್ಟಿದ್ದಾರೆ.