ಸಿನಿಮಾ

ಹಾಲಿವುಡ್ ಸಂದರ್ಶನದಲ್ಲಿ ಟಾಕ್ಸಿಕ್ ಚಿತ್ರದ ಬಿಗ್ ಸಿಕ್ರೇಟ್ ರಿವೀಲ್ ಮಾಡಿದ ಯಶ್

Share It

ಇತ್ತೀಚಿಗೆ ಹಾಲಿವುಡ್ ಸಂದರ್ಶನದಲ್ಲಿ ಭಾಗವಹಿಸಿದ್ದ ಯಶ್ ತಮ್ಮ ಬಹುನಿರೀಕ್ಷಿತ ಚಿತ್ರದ ಬಗ್ಗೆ ಮಾತಾನಾಡುತ್ತ ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ, ಈ ಚಿತ್ರವನ್ನು ಪೋರ್ಚುಗೀಸ್ ಯುಗದಲ್ಲಿ ಗೋವಾದಲ್ಲಿ ನಡೆಯುವ ತಂದೆ-ಮಗ ಸೇಡೀನ ನಾಟಕ ಎಂದು ವಿವರಿಸಿದ್ದಾರೆ.

ಬಹುನಿರೀಕ್ಷಿತ ಚಿತ್ರದಲ್ಲಿ ಯಶ್, ಕಿಯಾರಾ ಆಡ್ವಾಣಿ, ನಯಂದ್ರ ಮತ್ತು ಖುರೇಷಿ ಸೇರಿದಂತೆ ಸಮಗ್ರ ತಾರಾಗಣವನ್ನು ಒಳಗೊಂಡ ಇದು ಒಂದು ದುಬಾರಿ, ಪ್ಯಾನ್ ಇಂಡಿಯಾ ಯೋಜನೆಯಾಗಿದೆ ಎಂದು ತಿಳಿಸಿದರು.

ಟೀಸರ್‌ನಲ್ಲಿ ತೋರಿಸಿರುವ ಹಸಿಬಿಸಿ ದೃಶ್ಯಗಳ ಬಗ್ಗೆನೂ ಮಾತಾನಾಡಿದ್ದು, ಆ ದೃಶ್ಯಗಳ ಬಗ್ಗೆ ನಿರ್ದೇಶಕರಿಗೆ ದೂರದೃಷ್ಠಿ ಇದೆ ಹಾಗಾಗಿ ಟೀಕೆಗಳು ಪ್ರಕ್ರಿಯೆಯ ಭಾಗವೆಂದು ಹೇಳಿದರು. ಗೀತು ಮೋಹನ್ದಾಸ್ ಅವರ ಬಲವಾದ ವಿಶಿಷ್ಟ ದೃಷ್ಠಿಗಾಗಿ ಶ್ಲಾಘಿಸಿದರು.

ಯಶ್ ಮುಂಬರುವ ಬಹು ವೆಚ್ಚದ ಚಿತ್ರ ರಾಮಾಯಣ ಚಿತ್ರದ ಯೋಜನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅದನ್ನು ತಮ್ಮ ಕಂಪನಿಯಾದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಸಹ ನಿರ್ಮಿಸುತ್ತಾರೆ ಮತ್ತು ರಾವಣನ ಪಾತ್ರವನ್ನೂ ನಿರ್ವಹಿಸಲು ಸಿದ್ದರಾಗಿದ್ದಾರೆ.

ಕೆಜಿಎಫ್ ಅಧ್ಯಾಯ 3 ಗಾಗಿ ಯಾವುದೇ ತಕ್ಷಣದ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು ಏಕೆಂದರೆ ಅವರು ಟಾಕ್ಸಿಕ್ ಮತ್ತು ರಾಮಾಯಣಕ್ಕೆ ಹೆಚ್ಚಿನ ಅದ್ಯತೆ ನೀಡುತ್ತಿದ್ದಾರೆ.


Share It

You cannot copy content of this page