ಚಿಕ್ಕಮಗಳೂರು: ಕಾಫೀನಾಡು ಮತ್ತು ಮಲೆನಾಡು ಮಿಶ್ರಣವಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೂಡ ಬೇಸಿಗೆ ಮಳೆ
ಮಳೆಗಾಲದ ಮಳೆಯಂತೆ ಸುರಿದಿದೆ.
ಈ ಮೂಲಕ ವಾರದಲ್ಲಿ 3ನೇ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾದಂತಾಗಿದೆ.
ಇಂದು ಶನಿವಾರ ಚಿಕ್ಕಮಗಳೂರು ನಗರವಲ್ಲದೆ, ಜಯಪುರ, ಎನ್.ಆರ್.ಪುರ ಮತ್ತು ಮೂಡಿಗೆರೆಯಲ್ಲಿ ಮಳೆಯಾಗಿದೆ. ಕಳೆದ ಎರಡು ಸಲದ ಮಳೆಗಿಂತ ಇಂದಿನ ಮಳೆ ಜೋರಾಗಿತ್ತು. ಈ ಪ್ರದೇಶಗಳಲ್ಲಿ ಬಿರುಸಿನ ಮಳೆಯೊಂದಿಗೆ ಜೋರಾಗಿ ಗಾಳಿ ಬೀಸುತ್ತಿದೆ. ಚಿಕ್ಕಮಗಳೂರು ಪಶ್ಚಿಮಘಟ್ಟಗಳ ಮಡಿಲಲ್ಲಿರುವುದರಿಂದ ಪ್ರದೇಶದಲ್ಲಿ ಮಳೆಗೇನೂ ಕೊರತೆ ಇರಲ್ಲ. ಆದರೆ ಕಳೆದ ಮಾನ್ಸೂನ್ ಸೀಸನ್ ನಲ್ಲಿ ಈ ಪ್ರದೇಶದಲ್ಲೂ ಕೊರತೆ ಮಳೆಯಾಗಿತ್ತು. ಈಗ ಸುರಿಯುತ್ತಿರುವುದು ಬೇಸಿಗೆಯ ಅಕಾಲಿಕ ಮಳೆಯಾಗಿರುವುದರಿಂದ ಇದು ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ಅಲ್ಲವೇ ಅಲ್ಲ. ಮಾನ್ಸೂನ್ ಕರ್ನಾಟಕ ಪ್ರವೇಶಿಸಲು ಇನ್ನೂ ಒಂದು ತಿಂಗಳು ಬಾಕಿಯಿದೆ.
ಇದೇ ರೀತಿ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಅನೇಕ ಕಡೆ ಇಂದೂ ಕೂಡ ಬೇಸಿಗೆ ಕಾಲದ ಮಳೆ ಸುರಿದಿದೆ.