ಸುದ್ದಿ

ಮಹಾ ಕುಂಭಮೇಳದಲ್ಲಿ 45 ದಿನಗಳಲ್ಲಿ 66 ಕೋಟಿಗೂ ಹೆಚ್ಚಿನ ಭಕ್ತರಿಂದ ಪುಣ್ಯಸ್ನಾನ!

Share It

ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾಕುಂಭ ಮೇಳವು ಇಂದು ಮಹಾಶಿವರಾತ್ರಿ ಸ್ನಾನದೊಂದಿಗೆ ಮುಕ್ತಾಯಗೊಂಡಿದೆ.

ಮಹಾಕುಂಭದಲ್ಲಿ 5 ಪವಿತ್ರ ಸ್ನಾನಗಳು ನಡೆದವು. ಅವುಗಳಲ್ಲಿ ಮೂರು ಅಮೃತ ಸ್ನಾನಗಳು. ಜನವರಿ 14ರಂದು ಮಕರ ಸಂರಾಂತಿ, ಜನವರಿ 29ರಂದು ಮೌನಿ ಅಮಾವಾಸ್ಯೆ ಮತ್ತು ಫೆಬ್ರವರಿ 3ರಂದು ವಸಂತ ಪಂಚಮಿ ಅಮೃತ ಸ್ನಾನಗಳು. ಮಹಾಕುಂಭ ಮೇಳದ ಕೊನೆಯ ದಿನವಾದ ಇಂದು 1.44 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ.

ಈ 45 ದಿನಗಳಲ್ಲಿ ಒಟ್ಟು 66 ಕೋಟಿಗೂ ಹೆಚ್ಚು ಜನ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.


Share It

You cannot copy content of this page