ಬೆಂಗಳೂರು: ಬೆಂಗಳೂರಿನ ಶ್ರೀ ಸಿದ್ಧಾರೂಡ ಶಾಂತಾಶ್ರಮದಲ್ಲಿ ಶಿರಾತ್ರಿಯ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಬೆಂಗಳೂರಿನ ಜಯನಗರದ ಏಳನೇ ಮುಖ್ಯರಸ್ತೆಯಲ್ಲಿರುವ ಆಶ್ರಮದಲ್ಲಿ ಶ್ರೀ ಪರಮಪೂಜ್ಯ ಸದ್ಗುರು ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಗಳ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬುಧವಾರ ಬೆಳಗ್ಗೆ6 ಗಂಟೆಯಿAದ 9 ರವರೆಗೆ ಅಭಿಷೇಕ, 11 ಗಂಟೆಯಿAದ 12.30 ರವರೆಗೆ ಸತ್ಸಂಗ ಬಳಗದಿಂದ ಭಜನೆ ಕಾರ್ಯಕ್ರಮ ನಡೆಯಿತು.
ಸಂಜೆ 4 ರಿಂದ 6 ಗಂಟೆವರೆಗೆ ಭಜನೆ ಕಾರ್ಯಕ್ರಮ, 6.30 ರಿಂದ ಮಹಾಮಂಗಳಾರತಿ, ಸಿದ್ಧಾರೂಢ ಅಜ್ಜ ಅವರಿಗೆ ಹೂವಿನ ಅಲಂಕಾರ, ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆವರೆಗೆ ಜಾಗರಣೆ ಮತ್ತು ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಾರುತೇಶ್ವರ ಉತ್ತರ ಕರ್ನಾಟಕ ಭಜನೆ ಮಂಡಳಿ ಅವರು ರಾತ್ರಿಯಿಡಿ ನಡೆದ ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.