ಮುಂಬೈ: ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಾಟ್ ಕೂಪರ್‌ನಲಿದ್ದ ಜಾಹೀರಾತು ಫಲಕವೊಂದು ಮುರಿದು ಬಿದ್ದು, ೧೪ ಮಂದಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಕಳೆದ ನಾಲ್ಕು ದಿನಗಳಿಂದ ಮುಂಬೈ ಸೇರಿದಂತೆ ಮಹಾರಾಷ್ಟç ಭಾಗದಲ್ಲಿ ಬಿರುಗಾಳಿ ಸಮೇತ ಮಳೆ ಸುರಿದಿದೆ. ಘಾಟ್‌ಕೋಪರ್‌ನ ಪೆಟ್ರೋಲ್ ಪಂಪ್‌ನಲ್ಲಿ ದೊಡ್ಡ ಹೋರ್ಡಿಂಗ್ ಬಿದ್ದಿದ್ದರಿಂದ ೧೦೦ ಜನರು ಈ ಹೋರ್ಡಿಂಗ್‌ಗಳ ಅಡಿ ಸಿಲುಕಿದ್ದರು ಎನ್ನಲಾಗಿದೆ. ಈ ಅವಘಡದಲ್ಲಿ ೧೪ ಮಂದಿ ಸಾವನ್ನಪ್ಪಿದ್ದಾರೆ. ೬೫ಕಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ. ಮೃತರ ಸಂಬAಧಿಕರಿಗೆ ಸರ್ಕಾರ ಐದು ಲಕ್ಷ ರೂಪಾಯಿ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಹೋರ್ಡಿಂಗಸ್ ಅಳವಡಿಕೆಯಲ್ಲಿ ಆಗಿರುವ ಉಲ್ಲಂಘನೆಗಳ ಕುರಿತುವಿಚಾರಣೆ ನಡೆಸಲಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ತೀರ್ಮಾಣನಿಸಲಾಗಿದೆ. ಗಾಯಾಳುಗಳಿಗೆ ಸರಕಾರದಿಂದಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಮುಂಬೈನ ವಡಾಲಾದಲ್ಲಿ ಬೀಸಿದ ಬಿರುಗಾಳಿಯಿಂದ ಪಾರ್ಕಿಂಗ್‌ನ ಭಾಗ ಕುಸಿದಿದೆ. ಈ ಪಾರ್ಕಿಂಗ್ ಸ್ಥಳ ಕುಸಿದಾಗ, ಕೆಳಗೆ ಅನೇಕ ಕಾರುಗಳು ಇದ್ದವು. ಈ ಘಟನೆಯಲ್ಲಿ ಎಂಟರಿAದ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.