ಬೆಂಗಳೂರು: ಕರ್ನಾಟಕದ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಉತ್ತರ ಒಳನಾಡಿನ ಯಾದಗಿರಿ, ಕಲಬುರಗಿಯಲ್ಲಿ ಇಂದಿನಿಂದ ಮೇ 17ರವರೆಗೆ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ವಿವಿಧ ಭಾಗಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಇಂದೂ ಕೂಡ ಮಳೆ ಮುಂದುವರೆಯಲಿದೆ. ಸೋಮವಾರ ಪುತ್ತೂರು, ರಾಯಚೂರು, ಉಪ್ಪಿನಂಗಡಿ, ಕೊಟ್ಟಿಗೆಹಾರ, ಗಬ್ಬೂರಿನಲ್ಲಿ ಹೆಚ್ಚು ಮಳೆಯಾಗಿದೆ.
ಕಡೂರು, ಕೊಪ್ಪ, ಹುಣಸೂರು, ಕುರ್ಡಿ, ಔರಾದ್, ಚಿಕ್ಕಮಗಳೂರು, ಕಳಸ, ಗುತ್ತಲ್, ತುಮಕೂರು, ಯುಗಟಿ, ತಿಪಟೂರು, ಕೆಆರ್ನಗರ, ಚನ್ನರಾಯಪಟ್ಟಣ, ಗೋಕರ್ಣ, ಮಾಣಿ, ಗುಬ್ಬಿ, ತರೀಕೆರೆ, ಮಧುಗಿರಿ, ಪರಶುರಾಂಪುರ, ಕುಡತಿನಿ, ಬರಗೂರು, ಕಮ್ಮರಡಿ, ಹೊಳಲ್ಕೆರೆ, ಚಿಕ್ಕಜಾಜೂರು, ಹಿರಿಯೂರು, ಆಗುಂಬೆಯಲ್ಲಿ ಮುಂಗಾರು ಪೂರ್ವ ಮಳೆಯಾಗಿದೆ.
ಜೊತೆಗೆ ಸೇಡಬಾಳ, ಹಾವೇರಿ, ಬೆಳಗಾವಿ, ಜೋಯಿಡಾ, ಪಣಂಬೂರು, ಮೈಸೂರು, ಚಿತ್ರದುರ್ಗ, ರಾಮನಗರ, ಚಿಂತಾಮಣಿ, ಮಾನ್ವಿ, ಸವಣೂರು, ಧರ್ಮಸ್ಥಳ, ಸಂಕೇಶ್ವರ, ಗೇರುಸೊಪ್ಪ, ಧರ್ಮಸ್ಥಳ, ಜಯಪುರ, ಭಾಗಮಂಡಲ, ದಾವಣಗೆರೆ, ಸೋಮವಾರಪೇಟೆ, ಬೇಲೂರು, ನಾಯಕನಹಟ್ಟಿಯಲ್ಲಿ ಸಹ ಬೇಸಿಗೆ ಮಳೆ ಸುರಿದಿದೆ.