ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಹೊಳೆನರಸೀಪುರದ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಇಂದು ಎಸ್‌ಐಟಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.
ಹೊಳೇನರಸೀಪುರ ಜೆಎಂಎಫ್‌ಸಿ ನ್ಯಾಯಾಲಯ ಜೈಲಿನಲ್ಲಿರುವ ಅವರನ್ನು ಎಸ್‌ಐಟಿ ಪೊಲೀಸರ ವಶಕ್ಕೆ ನೀಡಲು ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ೯ ಗಂಟೆಗೆ ಎಸ್‌ಐಟಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.
ನಾಲ್ಕು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ಹೀಗಾಗಿ. ಮಂಗಳವಾರ ಬೆಳಗ್ಗೆ ೯ ಗಂಟೆಯಿAದ ಶುಕ್ರವಾರ ಮಧ್ಯಾಹ್ನ ೧೨ ಗಂಟೆವರೆಗೆ ಎಸ್‌ಐಟಿ ವಶಕ್ಕೆ ದೇವೇರಾಜೇಗೌಡ ಅವರನ್ನು ನೀಡಲಾಗುತ್ತದೆ.
ಎಸ್‌ಐಟಿ ವಿಚಾರಣೆ ವೇಳೆ ದೇವರಾಜೇಗೌಡ ಅವರ ಮೇಲಿರುವ ಲೈಂಗಿಕ ದೌರ್ಜನ್ಯ ಪ್ರಕರಣ, ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೆöÊವ್ ಪ್ರಕರಣ ಮತ್ತು ಮತ್ತಷ್ಟು ರಾಜಕಾರಣಿಗಳ ಮಾಹಿತಿಗಳನ್ನು ಹೊತ್ತು ದೆಹಲಿ ಕಡೆಗೆ ಹೋಗುತ್ತಿದ್ದರು ಎಂಬ ಆರೋಪದ ಕುರಿತು ಎಸ್‌ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಲಿದ್ದಾರೆ.