ರಾಜಕೀಯ ಸುದ್ದಿ

ರಾಜ್ಯದಲ್ಲಿ ಈವರೆಗೆ 158.94 ಕೋಟಿ ರೂ. ಮೊತ್ತದ ಮದ್ಯ ವಶ

Share It

ಬೆಂಗಳೂರು: ಪ್ರಸಕ್ತ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆ ಸಂದರ್ಭದಲ್ಲಿ ಭಾರೀ ಪ್ರಮಾಣದ ಮದ್ಯ ಪತ್ತೆಯಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ನಿನ್ನೆಯವರೆಗೆ 158.94 ಕೋಟಿ ರೂ. ಮೊತ್ತದ 142.32 ಲಕ್ಷ ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ಪ್ರಕಾರ, ಅಬಕಾರಿ ಇಲಾಖೆಯವರು 23.46 ಲಕ್ಷ ರೂ. ಮೌಲ್ಯದ 1,150 ಕೇಸ್ ಪೆಟ್ಟಿಗೆಗಳ 8,970 ಲೀಟರ್ ಮದ್ಯವನ್ನು ಕೊತ್ತನೂರು ಕಮ್ಮಸಂದ್ರ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. 49.88 ಲಕ್ಷ ರೂ. ಮೌಲ್ಯದ 1,155 ಕೇಸ್ ಪೆಟ್ಟಿಗೆಗಳ 9,108 ಲೀಟರ್ ಮದ್ಯವನ್ನು ಕೆ.ಜಿ.ಹಳ್ಳಿಯಲ್ಲಿ ಹಾಗೂ 46.14 ಲಕ್ಷ ರೂ. ಮೌಲ್ಯದ 13,800 ಲೀಟರ್ ಬಿಯರ್ ಅನ್ನು ಕಾಡುಗೊಂಡನಹಳ್ಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

89.25 ಲಕ್ಷ ಮೌಲ್ಯದ 1,186.200 ಲೀಟರ್ ಮದ್ಯವನ್ನು ಕಾಡುಗೊಂಡನಹಳ್ಳಿಯಲ್ಲಿ 55.62 ಲಕ್ಷ ರೂ.ಮೌಲ್ಯದ 7,386.120 ಲೀಟರ್ ಮದ್ಯವನ್ನು ದೊಡ್ಡಕಮ್ಮನಹಳ್ಳಿಯಲ್ಲಿ ಜಪ್ತಿ ಮಾಡಲಾಗಿದೆ.

ಅದೇ ರೀತಿ 76.86 ಲಕ್ಷ ರೂ. ಮೌಲ್ಯದ 4,811.400 ಲೀಟರ್ ಮದ್ಯವನ್ನು ಕೋಲಾರ ಟೌನ್‍ನ ತಮಕಾ ಕೈಗಾರಿಕಾ ಪ್ರದೇಶದಲ್ಲಿ, 59 ಲಕ್ಷ ಮೌಲ್ಯದ 14,688 ಲೀಟರ್ ಮದ್ಯವನ್ನು ಬಾಗಲಕೋಟೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.

34.02 ಲಕ್ಷ ಮೌಲ್ಯದ 9,108 ಲೀಟರ್ ಮದ್ಯವನ್ನು ಕೂಡ್ಲುಗೇಟ್‍ನಲ್ಲಿ 49.88 ಲಕ್ಷ ಮೌಲ್ಯದ 9,108 ಲೀಟರ್ ಮದ್ಯವನ್ನು ವೈಟ್‍ಫೀಲ್ಡ್‍ನಲ್ಲಿ 27.43 ಲಕ್ಷ ರೂ. ಮೌಲ್ಯದ 8,970 ಲೀಟರ್ ಮದ್ಯವನ್ನು ವೈಟ್‍ಫೀಲ್ಡ್ ಹಾಗೂ 46.14 ಲಕ್ಷ ರೂ. ಮೌಲ್ಯದ 13,800 ಲೀಟರ್ ಮದ್ಯವನ್ನು ಮಾದನಾಯಕನಹಳ್ಳಿಯಲ್ಲಿ ಅಬಕಾರಿ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ.

27.43 ಲಕ್ಷ ರೂ. ಮೌಲ್ಯದ 8,970 ಲೀಟರ್ ಮದ್ಯವನ್ನು ಸಂಜಯನಗರದಲ್ಲಿ ವಶಪಡಿಸಿಕೊಳ್ಳಲಾಗಿದೆ. ಕ್ಷಿಪ್ರಪಡೆಯವರು 1,34,92,800 ರೂ. ನಗದನ್ನು ಜಯನಗರದಲ್ಲಿ ವಶಪಡಿಸಿಕೊಂಡಿದ್ದು, ಬೇಗೂರು ಪೊಲೀಸ್ ಠಾಣೆ ತಂಡದವರು 10 ಲಕ್ಷ ರೂ. ಮೌಲ್ಯದ 5.557 ಕೆ.ಜಿ. ಗಾಂಜಾವನ್ನು ಬೇಗೂರಿನಲ್ಲಿ ವಶಪಡಿಸಿಕೊಂಡಿದ್ದಾರೆ.

ಕೋಲಾರದ ಸಿಇಎನ್ ಪೊಲೀಸ್ ಠಾಣೆ ತಂಡದವರು 10 ಲಕ್ಷ ರೂ. ಮೌಲ್ಯದ 10.140 ಕೆ.ಜಿ. ಗಾಂಜಾವನ್ನು ಕೋಲಾರದಲ್ಲಿ ವಶಪಡಿಸಿಕೊಂಡಿದ್ದಾರೆ.ಕ್ಷಿಪ್ರಪಡೆಯವರು 20 ಲಕ್ಷ ರೂ. ನಗದನ್ನು ರಾಬರ್ಟ್‍ಸನ್ ಪೇಟೆಯಲ್ಲಿ ಹಾಗೂ ಸ್ಥಿರ ಕಣ್ಗಾವಲು ತಂಡದವರು 12,049 ರೂ. ನಗದನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಕೋಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಂಡಿದ್ದಾರೆಂದು ಪ್ರಕಟಣೆ ತಿಳಿಸಿದೆ.


Share It

You cannot copy content of this page