ಸಿನಿಮಾ ಸುದ್ದಿ

ರಂಗಾಯಣ ರಘು ಖುಷಿಯಲ್ಲಿ: ‘ಪ್ರೇಮದ ಊರಲಿ’ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ

Share It

ಚಿತ್ರ ಯಶಸ್ಸಿನ ಹಿಂದಿನ ಕತೆ

‘ಪ್ರೇಮದ ಊರಲಿ’ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಓಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ರಂಗಾಯಣ ರಘು ಹೇಳಿದ್ದಾರೆ. ನಿರ್ದೇಶಕ ಮನೋಜ್ ಕುಮಾರ್ ಕಥೆ ಹೇಳಿದಾಗ ಖುಷಿಯಾಯಿತು, ಮಾಡುತ್ತೇನೆ ಎಂದು ಹೇಳಿದೆ ಎಂದು ಅವರು ನೆನಪಿಸಿಕೊಂಡಿದ್ದಾರೆ.

ನಿರ್ಮಾಪಕರ ಬಗ್ಗೆ ಆಸಕ್ತಿದಾಯಕ ವಿವರ

ಈ ಚಿತ್ರದ ನಿರ್ಮಾಪಕರು ಆರಂಭದಲ್ಲಿ ಕೊರಳಲ್ಲಿ ಬಂಗಾರದ ಚೈನ್ ಹಾಕಿಕೊಂಡು ಬಂದಿದ್ದರು. ಆದರೆ ಸಿನಿಮಾ ಮುಗಿಯುವ ಹೊತ್ತಿಗೆ ಕೊರಳು ಖಾಲಿಯಾಗಿತ್ತು. ಇನ್ನೊಬ್ಬ ನಿರ್ಮಾಪಕರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು, ಅವರು ಆ ಕೆಲಸವನ್ನು ಬಿಟ್ಟಿದ್ದಾರೆ ಎಂದು ರಘು ತಿಳಿಸಿದ್ದಾರೆ.

ನಟಿಯರ ಬಗ್ಗೆ ಮೆಚ್ಚುಗೆ

ಚಿತ್ರದ ನಾಯಕಿಯರಾದ ರಮಿಕಾ ಮತ್ತು ತಪಸ್ವಿಣಿ ಒಳ್ಳೆಯ ನಟಿಯರು. ಅವರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರಿಗೆ ನಾನು ಒಂದು ಸಂಕಲ್ಪ ಮಾಡಿಸುತ್ತೇನೆ ಎಂದು ರಘು ಹೇಳಿದರು. ತೆಲುಗು, ತಮಿಳು, ಹಿಂದಿ ಯಾವುದೇ ಭಾಷೆಯ ಚಿತ್ರ ಮಾಡಿದರೂ ಕನ್ನಡವನ್ನು ಮರೆಯುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿಸಿದರು.

ಕನ್ನಡ ಚಿತ್ರರಂಗದ ಸವಾಲು

ಕನ್ನಡ ಚಿತ್ರಗಳನ್ನು ಬೇರೆ ಭಾಷೆಯವರು ತಳ್ಳುತ್ತಲೇ ಇದ್ದಾರೆ. ನಾವು ಸ್ವಲ್ಪ ಜಾಗ ಕೊಟ್ಟಿದ್ದೇವು. ಆದರೆ ಈಗ ಅವರೆಲ್ಲ ನಮ್ಮನ್ನು ಆವರಿಸಿಕೊಳ್ಳುತ್ತಿದ್ದಾರೆ ಎಂದು ರಘು ಆತಂಕ ವ್ಯಕ್ತಪಡಿಸಿದರು. ಆದರೆ ‘ಪ್ರೇಮದ ಊರಲಿ’ ಚಿತ್ರದ ಮೂಲಕ ನಾವು ಈಗ ತಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಬಿಡುಗಡೆ ವಿವರ

ಈ ಚಿತ್ರ ಸೆಪ್ಟೆಂಬರ್ 25ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಿದೆ. ಈಗ ಉತ್ತರ ಭಾರತದಲ್ಲಿ ಅಕ್ಟೋಬರ್ 9ರಂದು ಬಿಡುಗಡೆಯಾಗುತ್ತಿದೆ. ವಿತರಕರಾದ ಜಯಣ್ಣ ಮತ್ತು ಬೋಗಣ್ಣ ಅವರು ಎಲ್ಲ ಕಡೆಗೆ ಈ ಚಿತ್ರವನ್ನು ಹಾಕಿದ್ದಾರೆ. ವಿದೇಶಗಳಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಕೆ.ಆರ್.ಜಿ. ಸಂಸ್ಥೆಯ ಕಾರ್ತಿಕ್ ಗೌಡ ಅವರು ರಿಲೀಸ್ ಮಾಡುತ್ತಿದ್ದಾರೆ.

ಚಿತ್ರದ ಶೋಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಜನ ಥಿಯೇಟರ್ಗೆ ಬಂದು ಚಿತ್ರ ನೋಡುತ್ತಿದ್ದಾರೆ. ಈ ವರ್ಷದ ಹಿಟ್ ಚಿತ್ರಗಳ ಪಟ್ಟಿಯಲ್ಲಿ ಇದೂ ಸೇರಿದೆ ಎಂದು ಹೇಳಬಹುದು.


Share It

You cannot copy content of this page