ಅಪರಾಧ ರಾಜಕೀಯ ಸುದ್ದಿ

ದಾಖಲೆಯಿಲ್ಲದ 2.93 ಕೋಟಿ ರೂ. ಪತ್ತೆ: ಎಟಿಎಂಗೆ ಹಣ ತುಂಬುವ ವಾಹನ ಜಪ್ತಿ

Share It

ಆನೇಕಲ್ : ಸೂಕ್ತ ದಾಖಲೆ ಇಲ್ಲದೆ ವಾಹನದಲ್ಲಿದ್ದ ಸಾಗಿಸುತ್ತಿದ್ದ 2.93 ಕೋಟಿ ರೂ. ಅನ್ನು ಹೆಬ್ಬಗೋಡಿ ಪೊಲೀಸರು ಸೀಜ್ ಮಾಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಸಿಎಂಎಸ್ ಏಜೆನ್ಸಿಗೆ ಸೇರಿದ ವಾಹನದಲ್ಲಿ ಎಟಿಎಂಗೆ ಹಣ ಸಾಗಿಸುವಾಗ ವಶಕ್ಕೆ ಪಡೆಯಲಾಗಿದೆ. ಹೆಬ್ಬಗೋಡಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ವಾಹನ ಪರಿಶೀಲನೆ ಮಾಡಿದ್ದು, ಬಂದೂಕು ಸಹಿತ ಸೆಕ್ಯೂರಿಟಿ ಗಾರ್ಡ್ ಇಲ್ಲದೆ ಹಣ ಸಾಗಿಸುತ್ತಿರುವುದು ಪತ್ತೆ ಆಗಿದೆ. ಅನುಮಾನಗೊಂಡು ಪರಿಶೀಲಿಸಿದಾಗ ದಾಖಲೆ ಇಲ್ಲದ ಹಣ ಪತ್ತೆ ಆಗಿದ್ದು, ಹಣದ ಬಗ್ಗೆ ಚುನಾವಣಾ ಆಯೋಗ ಮತ್ತು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 30 ಲಕ್ಷ ರೂ. ವಶಕ್ಕೆ
ಕೊಪ್ಪಳ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 30 ಲಕ್ಷ ರೂ. ಹಣವನ್ನು ಪೊಲೀಸರು ಮತ್ತು ತಹಶಿಲ್ದಾರ್ ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಕೆಡೆಬಾಗಿಲು ಬಳಿ ಚೆಕ್ ಪೋಸ್ಟ್​ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ, ಕಾರ್​ನಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ತಾಲೂಕಿನ ನಡವಿಯಿಂದ ಹೊಸಪೇಟೆಗೆ ಪೀರಸಾಭ್ ಎಂಬುವವರ ಹಣ ಸಾಗಿಸುತ್ತಿದ್ದರು. ಹಣಕ್ಕೆ ಯಾವುದೇ ದಾಖಲಾತಿಗಳು ಇಲ್ಲದೇ ಇರೋದರಿಂದ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಬಸ್​​​ನಲ್ಲಿ ಸಾಗಿಸುತ್ತಿದ್ದ 30 ಲಕ್ಷ ರೂ. ಹಣ ವಶಕ್ಕೆ
ಕರ್ನಾಟಕ ಗಡಿಗೆ ಹೊಂದಿರುವ ತಮಿಳುನಾಡಿನ ಜೂಜುವಾಡಿ ಚೆಕ್​​ಪೋಸ್ಟ್​ನಲ್ಲಿ 30.5 ಲಕ್ಷ ರೂ. ಹಣವನ್ನ ಸೀಜ್​ ಮಾಡಲಾಗಿದೆ. ಖಾಸಗಿ ಬಸ್​​​ನಲ್ಲಿ 30.5 ಲಕ್ಷ ರೂ. ಹಣ, 500 ಗ್ರಾಮ್​ ಚಿನ್ನಾಭರಣವನ್ನ ರಾಜ್​​​ಕುಮಾರ್ ಎಂಬಾತ ಸಾಗಿಸುತ್ತಿದ್ದ. ಆದರೆ ಸೂಕ್ತ ದಾಖಲೆ ಇಲ್ಲದೆ ಇದಿದ್ರಿಂದ ಹಣವನ್ನ ವಶಕ್ಕೆ ಪಡೆಯಲಾಗಿತ್ತು.

98.56 ಕೋಟಿ ಮೌಲ್ಯದ ಬಿಯರ್, ಕಚ್ಚಾ ವಸ್ತು ವಶಕ್ಕೆ
ಇತ್ತೀಚೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ 98.56 ಕೋಟಿ ರೂ. ಮೊತ್ತದ ಮದ್ಯ ವಶಪಡಿಸಿಕೊಳ್ಳಲಾಗಿತ್ತು. ಮೈಸೂರು ಜಿಲ್ಲೆಯ ನಂಜನಗೂಡಿನ‌ ಯುಬಿ ತಯಾರಿಕಾ ಘಟಕದ ಮೇಲೆ ಚಾಮರಾಜನಗರ ಅಬಕಾರಿ ಅಧಿಕಾರಿಗಳ ದಾಳಿ ನಡೆಸಿದ್ದರು. ಘಟಕದಲ್ಲಿ ನಿಗದಿಗಿಂತ ಹೆಚ್ಚುವರಿ ಬಿಯರ್ ತಯಾರಿಸಿ, ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು. ದಾಳಿ ವೇಳೆ 17 ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗಿತ್ತು.


Share It

You cannot copy content of this page