ರಾಜಕೀಯ ಸುದ್ದಿ

ಕೇರಳ ರಾಜ್ಯಪಾಲರ ಭೇಟಿ ಮಾಡಿದ ಡಿ ಎಸ್ ವೀರಯ್ಯ: ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ 

Share It

ಕೇರಳ ರಾಜ್ಯಪಾಲರ ಭೇಟಿ ಮಾಡಿದ ಡಿ ಎಸ್ ವೀರಯ್ಯ: ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ 

ತಿರುವನಂತಪುರ: ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೇರಳದ ರಾಜ್ಯಪಾಲರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಸಾಹಿತಿ ಡಿ ಎಸ್ ವೀರಯ್ಯ ಆಹ್ವಾನ ನೀಡಿದರು. 

ತಿರುವನಂತಪುರದ ರಾಜ್ಯಪಾಲರ ನಿವಾಸದಲ್ಲಿ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ವೀರಯ್ಯ ಅವರು, ಅಕ್ಟೋಬರ್ 5 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.

D S ವೀರಯ್ಯ ಅವರು ರಾಷ್ಟ್ರ ಚಿಕಿತ್ಸಕ ಡಾ ಬಿ ಆರ್ ಅಂಬೇಡ್ಕರ್ ಎಂಬ ಪುಸ್ತಕ ರಚನೆ ಮಾಡಿದ್ದು, ಬಾಬ ಸಾಹೇಬ್ ಅಂಬೇಡ್ಕರ್ ಅವರ ಜೀವನ, ಹೋರಾಟ, ಸಂಘಟನೆ ಮತ್ತು ಅವರ ಸಾಧನೆಗಳನ್ನು ಅದ್ಭುತವಾಗಿ ವಿವರಿಸಿದ್ದಾರೆ. ಆ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಅಕ್ಟೋಬರ್ 5 ರಂದು ನಡೆಯಲಿದೆ. 


Share It

You cannot copy content of this page