ವಧು ಹುಡುಕಲು ವಿಫಲವಾದ ಕಾರಣಕ್ಕೆ ಮ್ಯಾಟ್ರಿಮೋನಿಗೆ 60 ಸಾವಿರ ರೂ ದಂಡ

ban-img-3
Share It

ಬೆಂಗಳೂರು: ವಧು ಹುಡುಕಲು ವಿಫಲವಾದ ಕಾರಣ ಗ್ರಾಹಕ ನ್ಯಾಯಾಲಯವು ಬೆಂಗಳೂರಿನ ಮ್ಯಾಟ್ರಿಮೋನಿ ಸಂಸ್ಥೆಗೆ 60 ಸಾವಿರ ರೂ ದಂಡ ಹೇರಿದೆ.

ಬೆಂಗಳೂರಿನ ಎಂಎಸ್​ ನಗರ ನಿವಾಸಿ ಕೆ.ಎಸ್​. ವಿಜಯಕುಮಾರ್​ ಅವರು ತಮ್ಮ ಮಗ ಬಾಲಾಜಿಗೆ ಕನ್ಯೆ ಹುಡುಕುತ್ತಿದ್ದರು. ಅದರಂತೆ, ವಿಜಯಕುಮಾರ್ ಅವರು ನಗರದ ಕಲ್ಯಾಣ ನಗರದಲ್ಲಿರುವ ದಿಲ್ ಮಿಲ್ ಮ್ಯಾಟ್ರಿಮೋನಿಗೆ ಭೇಟಿ ನೀಡಿದ್ದರು.

ಈ ವೇಳೆ ಸಂಸ್ಥೆ ಬಾಲಾಜಿಗೆ 45 ದಿನಗಳಲ್ಲಿ ವಧು ಹುಡುಕುವುದಾಗಿ ಭರವಸೆ ನೀಡಿತ್ತು. ಬಳಿಕ, ಕೆಎಸ್​​ ವಿಜಯಕುಮಾರ್ ಅವರು ಮಾರ್ಚ್ 17 ರಂದು ಸಂಸ್ಥಗೆ ತಮ್ಮ ಮಗನ ಭಾವಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ನೀಡಿದ್ದರು.

ಜತೆಗೆ 30 ಸಾವಿರ ರೂ. ಶುಲ್ಕ ಕೂಡ ಪಾವತಿಸಿದ್ದರು. 45 ದಿನಗಳು ಕಳೆದರೂ ಸಂಸ್ಥೆ ವಧು ಹುಡುಕಿಕೊಡುವಲ್ಲಿ ವಿಫಲವಾಯಿತು. ಆಗ, ವಿಜಯಕುಮಾರ್​ ಅವರು ಹಣ ಮರಳಿಸುವಂತೆ ಹೇಳಿದರು. ಆದರೆ, ಸಂಸ್ಥೆಯ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ.

ಹೀಗಾಗಿ, ವಿಜಯಕುಮಾರ್ ಅವರು ಮಾರ್ಚ್ 30 ರಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ಆಗ, ಸಂಸ್ಥೆ ಏಪ್ರಿಲ್ 30ರವರೆಗೆ ಕಾಯುವಂತೆ ಮನವಿ ಮಾಡಿಕೊಂಡಿತು. ಒಂದು ತಿಂಗಳು ಕಾದರೂ ದಿಲ್ ಮಿಲ್​ ಮ್ಯಾಟ್ರಿಮೋನಿ ಸಂಸ್ಥೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ.

ಹೀಗಾಗಿ, ವಿಜಯಕುಮಾರ್​ ಮತ್ತೊಮ್ಮೆ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿ ವಿಜಯ್ ಕುಮಾರ್ ಅವರನ್ನು ನಿಂದಿಸಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನಂತರ, ವಿಜಯಕುಮಾರ್ ಮೇ 5 ರಂದು ಸಂಸ್ಥೆಗೆ ಲೀಗಲ್ ನೋಟಿಸ್ ನೀಡಿದರು.

ಇದಕ್ಕೆ ಸಂಸ್ಥೆ ಯಾವುದೇ ಉತ್ತರ ನೀಡಲಿಲ್ಲ. ಹೀಗಾಗಿ, ವಿಜಯಕುಮಾರ್ ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ವಿಜಯಕುಮಾರ್ ಅವರ ಆರೋಪಕ್ಕೆ ದಿಲ್ ಮಿಲ್‌ ಸಂಸ್ಥೆ ಯಾವುದೇ ಉತ್ತರ ನೀಡಲಿಲ್ಲ.


Share It

You cannot copy content of this page