ಉಪಯುಕ್ತ ರಾಜಕೀಯ ಸುದ್ದಿ

ತ್ಯಾಜ್ಯ ನೀರು ಶುದ್ಧೀಕರಣ: ಜಲಮಂಡಳಿ ಸೇರಿ ನಗರಾಭಿವೃದ್ಧಿ ಇಲಾಖೆಗಳಿಗೆ ಎಚ್ಚರಿಕೆ: ಸಚಿವ ರಾಮಲಿಂಗಾ ರೆಡ್ಡಿ

Share It


ಬೆಂಗಳೂರು: ತ್ಯಾಜ್ಯ ನೀರು ಶುದ್ಧೀಕರಣ ಸರಿಯಾಗಿ ಮಾಡದೇ ನದಿಗೆ ಹರಿಸುತ್ತಿರುವ ಸಂಬಂಧ ಬೆಂಗಳೂರು ಜಲಮಂಡಳಿ ಸೇರಿ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ವಾಯುಮಾಲಿನ್ಯ ಮಂಡಳಿಯಲ್ಲಿ ಸಭೆ ನಡೆಸಿದ ಅವರು, ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸರಿಯಾಗಿ ಸಂಸ್ಕರಣೆ ಮಾಡದೆ ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂದು ಎನ್ಜಿಟಿ ಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಒಂದು ವಾರದೊಳಗೆ ಸೂಕ್ತ ಮಾಹಿತಿ ಜತೆಗೆ ಬರುವಂತೆ ಸೂಚನೆ ನೀಡಿದ್ದು, ಮುಂದಿನ ಕ್ರಮದ ಎಚ್ಚರಿಕೆ ನೋಡಲಾಗಿದೆ.

ಬೆಂಗಳೂರು ಜಲಮಂಡಳಿ ಕೆ ಸಿ ವ್ಯಾಲಿ ನೀರು ಕೋಲಾರ ಚಿಕ್ಕ ಬಳ್ಳಾಪುರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಹೋಗುತ್ತಿದ್ದು, ಸಂಸ್ಕರಣೆಯಾಗುತ್ತಿಲ್ಲ. ಚಲಘಟ್ಟ ವ್ಯಾಲಿ, ವೃಷಭಾವತಿ ನೀರು ಕಾವೇರಿಗೆ ಸೇರುತ್ತಿದ್ದು, ಅದು ಸರಿಯಾಗಿ ಸಂಸ್ಕರಣೆ ಆಗುತ್ತಿಲ್ಲ. ಇದಕ್ಕಾಗಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆ ನೋಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ 2580 mld ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಪ್ರಸ್ತುತ 1100 ಎಂಎಲ್ಡಿ ನೀರು ಸಂಸ್ಕರಣೆಯಾಗುತ್ತಿದೆ. 1147 ಎಂಎಲ್ಡಿ ನೀರು ಸಂಸ್ಕರಣೆ ಕೆಲಸ ಆರಂಭವಾಗಬೇಕಿದೆ. 2029 ರೊಳಗೆ 9 stp ಕೇಂದ್ರಗಳ ಸಂಸ್ಕರಣೆ ಸಾಮರ್ಥ್ಯ ಪೂರ್ಣಗೊಳ್ಳಲಿದೆ. ಇದೆಲ್ಲವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೋಡಲಾಗಿದೆ ಎಂದು ಸಚಿವರು ತಿಳಿಸಿದರು.

30 ದಿನದಲ್ಲಿ ಸರಿಪಡಿಸಿ: ಸಚಿವರ ಎಚ್ಚರಿಕೆ: ಬೆಂಗಳೂರು ಜಲಮಂಡಳಿಯ ಯಾವುದೇ ತ್ಯಾಜ್ಯ ಸಂಸ್ಕರಣಾ ಘಟಕಗಳು ಹಸಿರು ನ್ಯಾಯಾಧಿಕರಣದ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಮೇಲ್ಕಂಡ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು 30 ದಿನಗಳ ಗಡುವು ನೀಡಿದ ಸಚಿವರು ಅನಂತರ ಸೂಕ್ತ ಮಾಹಿತಿ ಒದಗಿಸುವಂತೆ ಸೂಚಿಸಿದರು.

ಅಪಾರ್ಟ್ಮೆಂಟ್ ಎಸ್ಟಿಪಿ ಕಡ್ಡಾಯ: 80 ಕ್ಕೂ ಹೆಚ್ಚು ಮನಗಳನ್ನು ಹೊಂದಿರುವ ಅಪಾರ್ಟ್ಮೆಂಟ್ ಮಾಲೀಕರು stp ಅಳವಡಿಕೆ ಮಾಡಿಕೊಳ್ಳುವುದು ಕಡ್ಡಾಯ. ಆದರೆ, ಕೆಲವರು ಇನ್ನು stp ಅಳವಡಿಕೆ ಮಾಡಿಕೊಂಡಿಲ್ಲ. ಇಂತವರಿಗೆ ಎಚ್ಚರಿಕೆ ನೀಡಿ ಶೀಘ್ರವೇ stp ಅಳವಡಿಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ ಸಚಿವರು, ಮಳೆ ನೀರು ಕಾಲುವೆಗೆ ತ್ಯಾಜ್ಯ ನೀರು ಹರಿಸದಂತೆ ಕ್ರಮ ತೆಗೆದುಕೊಳ್ಳುವಂತೆಯೂ ಸೂಚನೆ ನೀಡಿದರು.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ, ಪರಿಶೀಲನೆ: ಈ ನಡುವೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನೀರು ಸಂಸ್ಕರಣೆ ಮಾಡದೇ ಕಾಲುವೆ ಹರಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಸಚಿವರು ನೀಡಿದರು. ಕೈಗಳಿಕೆಗಳು ನೀರು ಸಂಸ್ಕರಣೆ ಮಾಡದೆ ನದಿಗೆ ಹರಿಸಿದ್ದಲ್ಲಿ, ಕೈಗಾರಿಕೆಗಳಿಗೆ ಬೀಗ ಜಡಿಯುವುದಾಗಿ ಎಚ್ಚರಿಸಿದರು.


Share It

You cannot copy content of this page