ಅಪರಾಧ ಸುದ್ದಿ

ಕಲಬುರಗಿ : 9 ಪಾಕ್ ಪ್ರಜೆಗಳು ವಾಸ, ಗೈಡ್ ಲೈನ್ ಪ್ರಕಾರ ಹಿಂತಿರುಗಲು ಕಮಿಷನರ್ ಸೂಚನೆ

Share It

ಕಲಬುರಗಿ:ನಗರದಲ್ಲಿ 9 ಜನ ಪಾಕಿಸ್ತಾನ ಪ್ರಜೆಗಳು ಅಧಿಕೃತವಾಗಿ ವಾಸವಾಗಿದ್ದು,ಅವರೆಲ್ಲರನ್ನೂ ಕೇಂದ್ರ ಸರ್ಕಾರದ ಗೈಡ್ ಲೈನ್ ಪ್ರಕಾರ ಹಿಂತಿರುಗಲು ಸೂಚನೆ ನೀಡಲಾಗಿದೆ ಎಂದು ಕಲಬುರಗಿ ನಗರ ಪೋಲಿಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದರು.

ನಗರದ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಒಟ್ಟು 9 ಜನ ಪಾಕಿಸ್ತಾನ ಪ್ರಜೆಗಳು ವಾಸವಾಗಿದ್ದು, ಅದರಲ್ಲಿ 2 ಜನ ಲಾಂಗ್ ಟರ್ಮ್ ವೀಸಾ ಹೊಂದಿದವರಾಗಿದ್ದಾರೆ, 7 ಜನ ವಿಸಿಟರ್ಸ್ ವೀಸಾ ಹೊಂದಿದವರಾಗಿದ್ದು, ಇವರೆಲ್ಲರೂ ಕಳೆದ 20 ವರ್ಷಗಳಿಂದ ಕಲಬುರಗಿ ನಗರದಲ್ಲಿ ವಾಸವಾಗಿದ್ದು, ಗೈಡ್ ಲೈನ್ ಪ್ರಕಾರ ಹಿಂತಿರುಗಲು ಸೂಚಿಸಲಾಗಿದೆ ಎಂದು ಹೇಳಿದರು.

ಏಳು ಜನ ವಿಸಿಟರ್ಸ್ ವೀಸಾ ಹೊಂದಿದವರಲ್ಲಿ ಒಬ್ಬರು ಮಹಿಳೆ ಅನುಮತಿ ಪಡೆದು ಅಮೆರಿಕಾಗೆ ಟ್ರಾವೆಲ್ ಗೆ ತೆರಳಿದ್ದು,ಇನ್ನೂಳಿದ 6 ಜನರಿಗೂ ನಾವು ಈಗಾಗಲೇ ಮಾಹಿತಿ ನೀಡಿದ್ದು,ಅವರಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಇದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಸೇರಿ ಇತರೆ ಹಿರಿಯ ಪೋಲಿಸ್ ಅಧಿಕಾರಿಗಳು ಇದ್ದರು.


Share It

You cannot copy content of this page