ದೀಪಾವಳಿ ದಿನವೇ ಘೋರ ದುರಂತ : ಬೃಹತ್ ದೂಪದ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವು

IMG-20241102-WA0005
Share It

ಮಂಗಳೂರು: ದೀಪಾವಳಿ ಹಬ್ಬದಂದು ಘೋರ ದುರಂತ ಸಂಭವಿಸಿದೆ. ಚಲಿಸುತ್ತಿದ್ದ ಸ್ಕೂಟಿ ಮೇಲೆ ರಸ್ತೆ ಬಳಿಯ ಬೃಹತ್ ದೂಪದ ಮರ ಬಿದ್ದು ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ-ಪಂಜ ರಸ್ತೆಯ ಕೋಡಿಂಬಾಳ ಸನಿಹದ ಪುಳಿಕುಕ್ಕು ಎಂಬಲ್ಲಿ ಶನಿವಾರ ಸಂಭವಿಸಿದೆ.

ಎಡಮಂಗಲ ಗ್ರಾಮದ ದೇವಸ್ಯ ಸುಬ್ಬಣ್ಣ ಗೌಡ ಅವರ ಪುತ್ರ, ಎಡಮಂಗಲ ಸಿ.ಎ. ಬ್ಯಾಂಕ್ ಪಿಗ್ಮಿ ಸಂಗ್ರಾಹಕ ಸೀತಾರಾಮ ಗೌಡ (58) ಮೃತಪಟ್ಟವರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ದೀಪಾವಳಿ ಪ್ರಯುಕ್ತ ಹರಕೆ ಕಾರಣಕ್ಕೆ ಕೋಳಿ ತರಲು ಕಡಬಗೆ ಹೋಗಿ ಮನೆಗೆ ವಾಪಸಾಗುವಾಗ ಈ ದುರ್ಘಟನೆ ಸಂಭವಿಸಿದೆ.

ರಸ್ತೆ ಪಕ್ಕದ ದೂಪದ ಮರಗಳಿಂದ ಮೇಣ (ಹಾಲುಮಡ್ಡಿ) ಸಂಗ್ರಹಿಸಿ ಬುಡದಲ್ಲಿ ಶಿಥಿಲಗೊಂಡ ಮರಗಳನ್ನು ಹಾಗೆಯೇ ಬಿಡುವುದರಿಂದ ಈ ಭಾಗದಲ್ಲಿ ಮರಗಳು ಮುರಿದುಬಿದ್ದು ಆಗಾಗ್ಗೆ ದುರ್ಘಟನೆ ಸಂಭವಿಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆ ಗಮನಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.


Share It

You cannot copy content of this page