ನವದೆಹಲಿ : ದೇಶದ ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಸದಸ್ಯರ ತೀವ್ರ ಗದ್ದಲ ಗಲಾಟೆ ನಡುವೆ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾಗಿದ್ದ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ-ತಿದ್ದುಪಡಿ ವರದಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮಾರ್ಚ್ 10 ರಂದು ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ವಕ್ಫ್ ಆಸ್ತಿಗಳ ನೋಂದಣಿ ಸುಗಮಗೊಳಿಸುವ ಗುರಿ ಹೊಂದಿರುವ ಹಿನ್ನೆಲೆಯಲ್ಲಿ ಮಸೂದೆಯನ್ನು ಮಂಡಿಸಲು ದಾರಿ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ನೇತೃತ್ವದ ಜೆಪಿಸಿ, ವಿರೋಧ ಪಕ್ಷದ ಭಿನ್ನಾಭಿಪ್ರಾಯದ ನಡುವೆಯೂ ಶಾಸನಕ್ಕೆ ಹಲವಾರು ತಿದ್ದುಪಡಿಗಳನ್ನು ಸೂಚಿಸಿತ್ತು. ಇದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದರಿಂದ ಹೊಸ ಕಾನೂನು ರೂಪಿಸಲು ಸಹಕಾರಿಯಾಗಿದೆ
ಫೆಬ್ರ್ರವರಿ 13ರಂದು ಮಂಡಿಸಲಾಗಿದ್ದ ತಿದ್ದುಪಡಿ ಮಸೂದೆಗಳನ್ನು ಫೆಬ್ರವರಿ ೧೯ ರಂದು ನಡೆದ ಕೇಂದ್ರ ಸಭೆಯಲ್ಲಿ ಸಂಪುಟದಲ್ಲಿ ಮಸೂದೆಗೆ ತಿದ್ದುಪಡಿಗಳನ್ನು ಅನುಮೋದಿಸಿದೆ.
2025ರ ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೂ ಸಂಸತ್ತಿನಲ್ಲಿ ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು ಎರಡೂ ಸದನಗಳಲ್ಲಿ ಕಲಾಪಗಳನ್ನು ಸ್ವಲ್ಪ ಸಮಯದವರೆಗೆ ಮುಂದೂಡಲು ಕಾರಣವಾಗಿತ್ತು
ವಿರೋಧ ಪಕ್ಷ ಸಂಸದರು ಜಂಟಿ ಸಂಸದೀಯ ಸಭೆಯಲ್ಲಿ ಮಂಡಿಸಲಾಗಿದ್ದು ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಜೆಪಿಸಿ ವರದಿಯಿಂದ ಬದಲಾಯಿಸಲಾಗಿದೆ. ಅವುಗಳನ್ನು ವರದಿಯಲ್ಲಿ ಸೇರಿಸಬೇಕು ಎಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಟ್ಟು ಹಿಡಿದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು.
ಜನವರಿಯಲ್ಲಿ, ಸಂಸದೀಯ ಸಮಿತಿಯು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ ವಕ್ಫ್ ಮಸೂದೆಯ ಎಲ್ಲಾ ತಿದ್ದುಪಡಿಗಳನ್ನು ಅಂಗೀಕರಿಸಿತ್ತು ಮತ್ತು ವಿರೋಧ ಪಕ್ಷದ ಸದಸ್ಯರು ಸೂಚಿಸಿದ ಪ್ರತಿಯೊಂದು ಬದಲಾವಣೆ ಮಾಡುವಂತೆ ಪಟ್ಟು ಹಿಡಿದಿತ್ತು. ಇದು ಗದ್ದಲ ಗಲಾಟೆಗೆ ಅವಕಾಶ ಮಾಡಿಕೊಟ್ಟಿತ್ತು.
ವಕ್ಫ್ ತಿದ್ದುಪಡಿ ಕುರಿತು ಮಂಡಿಸಲಾದ 44 ತಿದ್ದುಪಡಿಗಳಲ್ಲಿ, 14 ಷರತ್ತುಗಳಿಗೆ ಬದಲಾವಣೆಗಳನ್ನು ಎನ್‌ಡಿಎ ಸದಸ್ಯರು ಸೂಚಿಸಿದ್ದಾರೆ, ಇವೆಲ್ಲವನ್ನೂ ಮತದಾನದ ನಂತರ ಸಮಿತಿಯು ಅಂಗೀಕರಿಸಲಾಗಿತ್ತು
ಪ್ರಮುಖ ತಿದ್ದುಪಡಿಗಳು
ವಕ್ಫ್ (ತಿದ್ದುಪಡಿ) ಮಸೂದೆಯು ಮುಸ್ಲಿಂ ಸಮುದಾಯದಿಂದ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದಾನ ಮಾಡಿದ ಆಸ್ತಿಗಳನ್ನು ಮೇಲ್ವಿಚಾರಣೆ ಮಾಡುವ ವಕ್ಫ್ ಮಂಡಳಿಗಳ ಆಡಳಿತದ ಸಂಪೂರ್ಣ ಕೂಲಂಕಷ ಪರೀಕ್ಷೆ ಮಾಡುವ ಪ್ರಸ್ತಾಪ ಮತ್ತು ತಿದ್ದುಪಡಿಗೆ ಜೆಪಿಸಿ ಸಮ್ಮತಿ ನೀಡಿದೆ.
ಮಸೂದೆಯ ಪ್ರಮುಖ ನಿಬಂಧನೆಗಳಲ್ಲಿ ರಾಜ್ಯ ವಕ್ಫ್ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಸೇರಿಸುವುದು ಮತ್ತು ಆಸ್ತಿಯು ವಕ್ಫ್ ಆಸ್ತಿಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸರ್ಕಾರಿ ಅಧಿಕಾರಿಯಿಂದ ಮಧ್ಯಸ್ಥಿಕೆ ವಹಿಸುವುದೂ ಹೊಸ ತಿದ್ದುಪಡಿ ಮಸೂದೆಯಲ್ಲಿ ಒಳಗೊಂಡಿದೆ
6 ತಿಂಗಳಿಗೂ ಹೆಚ್ಚು ಸಮಯದ ಚರ್ಚೆಗಳ ನಂತರ, ಜನವರಿ 30 ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಜೆಪಿಸಿಯ ಅಂತಿಮ ವರದಿ ಸಲ್ಲಿಸಲಾಗಿತ್ತು. ಆ ನಂತರ ಫೆಬ್ರವರಿ 13 ರಂದು ಸಂಸತ್ತಿನ ಉಭಯ ಸದನಗಳಲ್ಲಿ ತಿದ್ದುಪಡಿ ವರದಿ ಮಂಡಿಸಲಾಗಿತ್ತು.
ತಿದ್ದುಪಡಿ ಮಾಡಿದ ಪರಿಷ್ಕೃತ ಮಸೂದೆಯನ್ನು ಜನವರಿ ೨೯ ರಂದು ಸಮಿತಿ ಅಂಗೀಕರಿಸಿತ್ತು. ಆಡಳಿತಾರೂಢ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ ೧೪ ತಿದ್ದುಪಡಿಗಳನ್ನು ಅನುಮೋದಿಸಲಾಗಿದ್ದರೂ, ವಿರೋಧ ಪಕ್ಷದ ಸಂಸದರು ಸೂಚಿಸಿದ ಬದಲಾವಣೆಗಳನ್ನು ತಿರಸ್ಕರಿಸಲಾಗಿತ್ತು.