ಬೆಂಗಳೂರು: ಕಿರುತೆರೆಯ ನಟಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಕೇರಳ ಮೂಲಕ ಕಾಮಕನೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕೇರಳ ಮೂಲದ ನವೀನ್ ಎಂದು ಹೇಳಲಾಗಿದ್ದು, ಈತ ನಟಿಗೆ ಫೇಸ್ ಬುಕ್ ಮೂಲಕ ಅಶ್ಲೀಲ ಫೋಟೋಗಳನ್ನು ಕಳಿಹಿಸುತ್ತಿದ್ದ ಎಂದು ಹೇಳಲಾಗಿದೆ.ಈ ಬಗ್ಗೆ ಆತನಿಗೆ ಎಚ್ಚರಿಕೆ ನೀಡಿದ್ದ ನಟಿ, ಆತನ ಕಾಟ ಹೆಚ್ಚಾದಂತೆ ಪೊಲೀಸರ ಮೊರೆ ಹೋಗಿದ್ದಾರೆ.
ನಟಿಯ ದೂರಿನ ಬೆನ್ನಲ್ಲೇ ಆತನನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

