ಅಪರಾಧ ಸುದ್ದಿ

ವಾಟ್ಸಪ್ ನಲ್ಲಿ ದ್ವೇಷಪೂರಿತ ಸಂದೇಶ ಹಂಚಿಕೆ: ಇಬ್ಬರನ್ನು ಬಂಧಿಸಿದ ಪೊಲೀಸರು

Share It

ಬ್ರಹ್ಮಾವರ: ವಾಟ್ಸಾಪ್ ನಲ್ಲಿ ದ್ವೇಷಪೂರಿತವಾದ ಸಂದೇಶಗಳನ್ನು ಹಂಚಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಾಟ್ಸಾಪ್ ಗ್ರೂಪ್‌ನಲ್ಲಿ ಇಂತಹ ದ್ವೇಷದ ಸಂದೇಶ ಹಂಚಿದ ಆರೋಪದಲ್ಲಿ ಕೆ. ನಾಗರಾಜ್ ಹಾಗೂ ಶಿಕ್ಷಕರ ಸಹಕಾರ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಕುಮಾರ್ ಶೆಟ್ಟಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ವಾಟ್ಸಾಪ್‌ನಲ್ಲಿ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ವಿಡಿಯೋ ಶೇರ್ ಮಾಡಿದ ಆರೋಪದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.


Share It

You cannot copy content of this page