ಬೆಂಗಳೂರು: ಸಾಕು ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರಿಗೆ 40 ಹೊಲಿಗೆ ಹಾಕಿರುವ ಘಟನೆ ರಾಜಧಾನಿಯ ಎಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ.
ಎಚ್ಎಸ್ಆರ್ ಲೇಔಟ್ನ ಟೀರ್ಸ್ ಕಾಲನಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ಜ.೨೬ರಂದು ದಾಳಿ ಮಾಡಿತ್ತು. ಈ ವೇಳೆ ನಾಯಿ ಆಕೆಯ ಮುಖ, ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ಕಚ್ಚಿದ್ದರಿಂದ ಗಂಭೀರ ಗಾಯಗಳಾಗಿದ್ದವು. ಆಕೆಯ ರಕ್ಷಣೆಗೆ ಬಂದ ವ್ಯಕ್ತಿಯ ಮೇಲೂ ನಾಯಿ ದಾಳಿ ನಡೆಸಿದ್ದು, ಗಾಯಗೊಳಿಸಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಆಕೆಯ ಗಾಯಗಳಿಗೆ ೪೦ ಹೊಲಿಗೆಗಳನ್ನು ಹಾಕಿದ್ದಾರೆ ಎಂದು ಹೇಳಲಾಗಿದ್ದು, ಮಹಿಳೆ ಘಟನೆಯ ಸಂಬAಧ ಎಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಯಿ ಅದೇ ಬಡಾವಣೆಯಲ್ಲಿ ವಾಸವಿರುವ ಅಮರೇಶ್ ರೆಡ್ಡಿ ಎಂಬುÄವವರಿಗೆ ಸೇರಿದ್ದು, ಮಾಲೀಕನ ನಿರ್ಲಕ್ಷö್ಯದಿಂದಲೇ ಮಹಿಳೆಯ ಮೇಲೆ ದಾಳಿ ನಡೆಸಿದೆ ಎಂದು ದೂರಲಾಗಿದೆ. ಮಾಲೀಕನ ನಿರ್ಲಕ್ಷö್ಯದ ವಿರುದ್ಧ ಎಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

