ಅಪರಾಧ ಸುದ್ದಿ

400 ಕೋಟಿ ದರೋಡೆ ಪ್ರಕರಣ: ಪ್ರಮುಖ ಆರೋಪಿ ಸಾಳ್ವೆ ಬಂಧನ

Share It

ನಾಸಿಕ್: 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಿಶೋರ್ ಸಾಳ್ವೆಯನ್ನು ನಾಸಿಕ್ ಘೋಟಿ ಪೊಲೀಸರು ಬಂಧಿಸಿದ್ದಾರೆ.

ಸಾಳ್ವೆ ಬಂಧನದಿAದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಸಂದೀಪ್ ಪಾಟೀಲ್ ಕಿಡ್ನಾಪ್ ಮತ್ತು 400 ಕೋಟಿ ರು. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.

ಸಂದೀಪ್ ಪಾಟೀಲ್ ತನ್ನನ್ನು ಕಿಶೋರ್ ಸಾಳ್ವೆ ಕೊಡ್ನಾಪ್ ಮಾಡಿದ್ದ ಎಂಬ ಫೇಸ್ಬುಕ್ ಲೈವ್ ಮೂಲಕ ಆರೋಪಿಸಿದ್ದ. ಅನಂತರ ಆತನಿಂದ ದೂರು ಪಡೆದುಕೊಂಡಿರುವ ಪೊಲೀಸರು, ದೂರಿನ ಅನ್ವಯ ಸಾಳ್ವೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಮುಖ ಆರೋಪಿಯಾಗಿರುವ ಕಿಶೋರ್ ಸಾಳ್ವೆ ಬಂಧನದಿAದ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ಆತ ಆಡಿಯೋ ಸಂಭಾಷಣೆಯಲ್ಲಿ ಹೇಳಿರುವಂತೆ ಗುಜರಾತ್ ರಾಜಕಾರಣಿ ಪ್ರಕರಣದಲ್ಲಿರುವುದು ಸೇರಿ ಪ್ರಮುಖ ಸಂಗತಿಗಳು ಹೊರಬೀಳಲಿವೆ.


Share It

You cannot copy content of this page