ಅಪರಾಧ ಸುದ್ದಿ

7 ದಿನದ ಗಂಡು ಮಗುವಿನ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ದಂಪತಿ

Share It

ಕೋಲಾರ: ಏಳು ದಿನದ ಹಸುಗೂಸನ್ನು ಮಾರಾಟ ಮಾಡಲು ಪ್ರಯತ್ನಿಸಿದ ದಂಪತಿ ಸಿಕ್ಕಿಬಿದ್ದಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನೀತು ಮತ್ತು ರಾಘವೇಂದ್ರ ಎಂಬ ದಂಪತಿಗಳು ತಮ್ಮ ಏಳು ದಿನದ ಗಂಡು ಮಗುವಿನ ಮಾರಾಟಕ್ಕೆ ಮುಂದಾಗಿದ್ದು, ಇದೀಗ ಸಿಕ್ಕಿಬಿದ್ದು ಪೊಲೀಸರ ಅತಿಥಿಗಳಾಗಿದ್ದಾರೆ.

ಮಧ್ಯವರ್ತಿ ನಾರಾಯಣ ಸ್ವಾಮಿ ಎಂಬುವವರ ಮೂಲಕ 2 ಲಕ್ಷ ರು.ಗಳಿಗೆ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page