ಉಪಯುಕ್ತ ಸುದ್ದಿ

BSNLನಲ್ಲಿ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳು; ಆನ್ ಲೈನ್ ಪರೀಕ್ಷೆ ಮೂಲಕ ಆಯ್ಕೆ

Share It

ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ದೂರಸಂಪರ್ಕ ಸಂಸ್ಥೆಯಾದ Bharat Sanchar Nigam Limited (ಬಿಎಸ್‌ಎನ್‌ಎಲ್) 2026ನೇ ಸಾಲಿನ ನೇಮಕಾತಿಗಾಗಿ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಸರ್ಕಾರಿ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.

ಈ ನೇಮಕಾತಿಯಲ್ಲಿ ಒಟ್ಟು 120 ಹುದ್ದೆಗಳಿದ್ದು, ಅವುಗಳಲ್ಲಿ 95 ಟೆಲಿಕಾಂ ವಿಭಾಗಕ್ಕೆ ಹಾಗೂ 25 ಹಣಕಾಸು ವಿಭಾಗಕ್ಕೆ ಮೀಸಲಾಗಿದೆ.

ಅರ್ಹತೆಗಳು: ಟೆಲಿಕಾಂ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ.60 ಅಂಕಗಳೊಂದಿಗೆ ಬಿ.ಇ/ಬಿ.ಟೆಕ್ ಪದವಿ ಪಡೆದಿರಬೇಕು. ಹಣಕಾಸು ವಿಭಾಗದ ಹುದ್ದೆಗಳಿಗೆ ಸಿಎ (CA) ಅಥವಾ ಸಿಎಮ್ಎ (CMA) ಅರ್ಹತೆ ಅಗತ್ಯವಾಗಿದೆ. ಜೊತೆಗೆ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಸಂಬಂಧಿತ ಕೆಲಸದ ಅನುಭವ ಇರಬೇಕು.

ವಯೋಮಿತಿ: ಮಾರ್ಚ್ 7, 2026ರಂತೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ 30 ವರ್ಷವಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ ಗರಿಷ್ಠ 15 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ₹2,500 ಪಾವತಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು PwBD ಅಭ್ಯರ್ಥಿಗಳಿಗೆ ₹1,250 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಅಂತಿಮ ಆಯ್ಕೆ ಆನ್‌ಲೈನ್ ಲಿಖಿತ ಪರೀಕ್ಷೆಯ ಆಧಾರದಲ್ಲಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹24,900ರಿಂದ ₹50,500ರವರೆಗೆ ವೇತನ ನೀಡಲಾಗುತ್ತದೆ.

ಮುಖ್ಯ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 7 ರಾತ್ರಿ 10 ಗಂಟೆಯವರೆಗೆ ಅವಕಾಶವಿದೆ. ಅರ್ಜಿ ತಿದ್ದುಪಡಿ ಮಾಡಲು ಮಾರ್ಚ್ 8ರಿಂದ ಮಾರ್ಚ್ 15ರವರೆಗೆ ಅವಕಾಶ ನೀಡಲಾಗಿದೆ. ಲಿಖಿತ ಪರೀಕ್ಷೆ ಮಾರ್ಚ್ 29ರಂದು ನಡೆಯಲಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಗಳನ್ನು ಪರಿಶೀಲಿಸುವುದು ಅಗತ್ಯ. ಸರ್ಕಾರಿ ವಲಯದಲ್ಲಿ ಸ್ಥಿರ ಮತ್ತು ಉತ್ತಮ ಭವಿಷ್ಯ ಕನಸು ಕಾಣುವವರಿಗೆ ಇದು ಸುವರ್ಣಾವಕಾಶವಾಗಿದೆ.


Share It

You cannot copy content of this page