ಅಪರಾಧ ಸುದ್ದಿ

ಹಳಿ ತಪ್ಪಿದ ಡ್ರೈವರ್ ಲೆಸ್ ಮೆಟ್ರೋ: ಪ್ರಯೋಗಾರ್ಥ ಚಾಲನೆ ವೇಳೆ ಅವಘಡ

Share It

ಬೆಂಗಳೂರು: ನಮ್ಮ ಮೆಟ್ರೋ ಮಹತ್ವಾಕಾಂಕ್ಷೆಯ ಯೆಲ್ಲೋ ಲೈನ್ ಪ್ರಯೋಗಾರ್ಥ ಚಾಲನೆ ವೇಳೆ ಡ್ರೈವರ್ ಲೆಸ್ ಮೆಟ್ರೋ ರೈಲು ಹಳಿ ತಪ್ಪಿದೆ ಎನ್ನಲಾಗಿದೆ.

ನೆನ್ನೆ ಹೆಬ್ಬಗೋಡಿ ಮೆಟ್ರೋ ವ್ಯಾಪ್ತಿಯಲ್ಲಿ ಪ್ರಯೋಗಾರ್ಥ ಚಾಲನೆ ನಡೆಸುವಾಗ ಹಳಿ ತಪ್ಪಿದ್ದು, ರೈಲ್ವೆ ಬೋರ್ಡ್ ಅಧಿಕಾರಿಗಳು ಡ್ರೈವರ್ ಲೆಸ್ ಮೆಟ್ರೋ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ತನಿಖೆಗೆ ಸೂಚಿಸಿದ್ದು, ಇದರ ಅನುಸಾರ ಬಿಎಂಆರ್‌ಸಿಎಲ್ ಆರು ಜನರ ಸತ್ಯಶೋಧನಾ ಸಮಿತಿಯನ್ನು ರಚನೆ ಮಾಡಿದೆ. ಸಮಿತಿಯು ಯೆಲ್ಲೋ ಮಾರ್ಗದ ಡ್ರೈವರ್ ಲೆಸ್ ಮೆಟ್ರೋ ಚಾಲನೆಯ ಸಾಧಕ-ಭಾದಕಗಳನ್ನು ಕುರಿತು ಚರ್ಚೆ ನಡೆಸಿ, ತಪಾಸಣೆ ನಡೆಸಿ ವರದಿ ನೀಡಲಿದೆ.


Share It

You cannot copy content of this page