ಡಿಜಿಟಲ್ ಸೇವೆಗಳನ್ನು ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿ ವಿಸ್ತರಿಸುವ ಉದ್ದೇಶದಿಂದ CSC e-Governance Services India Limited ಆಧಾರ್ ಸೂಪರ್‌ವೈಸರ್ ಮತ್ತು ಆಪರೇಟರ್ ಹುದ್ದೆಗಳಿಗಾಗಿ ನೇಮಕಾತಿ ಪ್ರಕಟಿಸಿದೆ. ಒಟ್ಟು 252 ಹುದ್ದೆಗಳಿದ್ದು, ಆಯ್ಕೆಯಾದವರು ತಮ್ಮದೇ ಜಿಲ್ಲೆಯ ಆಧಾರ್ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಪಡೆಯಲಿದ್ದಾರೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 10 ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ: ಸೂಪರ್‌ವೈಸರ್: ಆಧಾರ್ ಕೇಂದ್ರದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿ.
ಆಪರೇಟರ್: ಹೊಸ ಆಧಾರ್ ನೋಂದಣಿ, ಮಾಹಿತಿ ತಿದ್ದುಪಡಿ ಹಾಗೂ ನವೀಕರಣ ಕಾರ್ಯಗಳು.
ಅರ್ಹತೆ: ಕನಿಷ್ಠ 12ನೇ ತರಗತಿ ಉತ್ತೀರ್ಣರಾಗಿರಬೇಕು. ಪರ್ಯಾಯವಾಗಿ, 10ನೇ ತರಗತಿಯೊಂದಿಗೆ 2 ವರ್ಷಗಳ ಐಟಿಐ ಅಥವಾ 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ ಹೊಂದಿದವರೂ ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಜ್ಞಾನ ಅಗತ್ಯ. ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಸಂಬಂಧಿತ ಜಿಲ್ಲೆಯ ಸ್ಥಳೀಯ ಭಾಷೆಯಲ್ಲಿ ಪರಿಣತಿ ಇರಬೇಕು.
ನೇಮಕಾತಿ ಸ್ವರೂಪ: ಈ ಹುದ್ದೆಗಳು ಒಪ್ಪಂದ ಆಧಾರಿತವಾಗಿದ್ದು, ಆರಂಭದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಅವಧಿ ವಿಸ್ತರಣೆಯ ಸಾಧ್ಯತೆ ಇದೆ. ವೇತನವು ಸಂಬಂಧಿತ ರಾಜ್ಯದ ಕಾರ್ಮಿಕ ನಿಯಮಾವಳಿಗಳ ಪ್ರಕಾರ ನಿಗದಿಯಾಗುತ್ತದೆ.
ಅರ್ಜಿ ವಿಧಾನ: ಅಭ್ಯರ್ಥಿಗಳು csc.gov.in/ask ವೆಬ್‌ಸೈಟ್‌ಗೆ ಭೇಟಿ ನೀಡಿ, ರಾಜ್ಯ ಮತ್ತು ಜಿಲ್ಲಾವಾರು ಹುದ್ದೆಗಳನ್ನು ಪರಿಶೀಲಿಸಿ “Apply Now” ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿದ ಬಳಿಕ ಪ್ರತಿಯನ್ನು ಸಂಗ್ರಹಿಸಿಕೊಳ್ಳುವುದು ಸೂಕ್ತ.

