ಅಪರಾಧ ಸುದ್ದಿ

ನಕಲಿ e – PID ಸಂಖ್ಯೆಗಳನ್ನು ಸೃಷ್ಟಿಸಿ, e – Khata ಮಾಡಿಕೊಟ್ಟಿರುವ ಪ್ರಕರಣ: GBA ಮುಖ್ಯ ಆಯುಕ್ತರಿಗೆ ಎನ್.ಆರ್. ರಮೇಶ್ ದೂರು

Share It

ಬೆಂಗಳೂರು:ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ 9 ಸ್ವತ್ತುಗಳಿಗೆ ಹತ್ತಾರು ಲಕ್ಷ ರು. ಲಂಚ ಪಡೆದು ನಕಲಿ e – PID ಸಂಖ್ಯೆ ಸೃಷ್ಟಿಸಿ, ನಿಯಮಗಳನ್ನು ಗಾಳಿಗೆ ತೂರಿ e – Khata ಗಳನ್ನು ಮಾಡಿರುವ ಹಗರಣ ಬೆಳಕಿಗೆ ಬಂದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.

ಈ ಕುರಿತು ಬೆಂಗಳೂರು ಪಶ್ವಿಮ ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದು, ಈಗಾಗಲೇ ಹಲವಾರು ಬೃಹತ್ ಹಗರಣಗಳಲ್ಲಿ ಭಾಗಿಯಾಗಿರುವ ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್ ಈ ರೀತಿ ಕಾನೂನು ಬಾಹಿರವಾಗಿ e – PID ಸಂಖ್ಯೆಗಳನ್ನು ಸೃಷ್ಟಿಸಿ, ನಕಲಿ  e – Khata ಗಳನ್ನು ಮಾಡಿರುತ್ತಾರೆ. ವಾಸ್ತವವಾಗಿ e – Khata Website ನಲ್ಲಿ ಒಂದು ಸ್ವತ್ತಿನ e – PID ಸಂಖ್ಯೆಯನ್ನು ನಮೂದಿಸಿದಾಗ ಖಾತೆದಾರರ ಹೆಸರು ಮತ್ತು ಖಾತೆ ಪುಸ್ತಕದಲ್ಲಿ ಸದರಿ ಖಾತೆದಾರರ ಹೆಸರು ನಮೂದಾಗಿರುವ ಪುಟವನ್ನು Scan ಮಾಡಿ Upload ಮಾಡಿರುವ ಪ್ರತಿ ಕಾಣಿಸಬೇಕಿರುತ್ತದೆ ಎಂದಿದ್ದಾರೆ.

ಆದರೆ, ಇಲ್ಲಿ ಖಾತೆದಾರರ ಹೆಸರು ಮಾತ್ರ Online ನಲ್ಲಿ ಇದ್ದು, Scan ಮಾಡಿ upload ಮಾಡಿರುವ ಖಾತೆ ಪುಸ್ತಕದ ಪ್ರತಿಯಲ್ಲಿ ಖಾತೆದಾರರ ಹೆಸರು ಖಾಲಿ ಇರುತ್ತದೆ. ಹೊಸಹಳ್ಳಿ ಗ್ರಾಮದ ಸ್ವತ್ತಿನ ಸಂಖ್ಯೆ: 09, ಖಾತೆ ಸಂಖ್ಯೆ: 15/3/15/29/09 ರ e – PID ಸಂಖ್ಯೆಯನ್ನು e – Khata Website ನಲ್ಲಿ ನಮೂದಿಸಿದರೆ ಖಾತೆದಾರರ ಹೆಸರು ಮಧು ಎಂಬುದಾಗಿ ಕಾಣುತ್ತಿದ್ದು, Scan ಮಾಡಿ Upload ಮಾಡಿರುವ ಖಾತೆ ಪುಸ್ತಕದ ಪ್ರತಿಯಲ್ಲಿ ಖಾತೆದಾರರ ಹೆಸರು ಖಾಲಿ ಇರುತ್ತದೆ ಎಂದು ವಿವರಿಸಿದ್ದಾರೆ.

ಈ ರೀತಿ 9 ಸ್ವತ್ತುಗಳಿದ್ದು, ಈಗಾಗಲೇ 4 ಸ್ವತ್ತುಗಳಿಗೆ e – Khata ಗಳನ್ನು ವಿತರಿಸಿರುತ್ತಾರೆ ಹಾಗೂ ಇನ್ನುಳಿದ 4 ಸ್ವತ್ತುಗಳಿಗೆ Draft  e – Khata ಗಳನ್ನು ಸಿದ್ಧಪಡಿಸಿರುತ್ತಾರೆ. ಖಾತಾ ಪುಸ್ತಕದಲ್ಲಿ ಖಾಲಿ ಇರುವ ಸ್ವತ್ತುಗಳಿಗೆ ಕಡತ ಇಲ್ಲದಿದ್ದರೂ ಸಹ ಅನಾಮಿಕ ಮಧು ಎಂಬುವವರ ಹೆಸರಿಗೆ Case Worker login ನಲ್ಲಿ ಹೊಸದಾಗಿ ಖಾತಾಗಳನ್ನು Entry ಮಾಡಿ ARO login ನಲ್ಲಿ ಅನುಮೋದನೆ ನೀಡಿರುತ್ತಾರೆ ಎಂದು ಆರೋಪಿಸಿದ್ದಾರೆ.

ಇಂತಹ ಪ್ರಕರಣಗಳು ಕೇವಲ ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ಮತ್ತು ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ಮಾತ್ರವೇ ಕಾನೂನು ಬಾಹಿರವಾಗಿ e – PID ಗಳನ್ನು ಸೃಷ್ಟಿಸಿರುವ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚು ಇರುತ್ತದೆ ಮತ್ತು ನಕಲಿ e – Khata ಗಳನ್ನು ಮಾಡಿರುವ ಸಂಖ್ಯೆಯೂ ಸಹ ಅಷ್ಟೇ ಪ್ರಮಾಣದಲ್ಲಿರುತ್ತದೆ ಎಂದಿದ್ದಾರೆ.

ತಾವು ಯಾವುದೇ ಮುನ್ಸೂಚನೆ ನೀಡದೆ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿಗಳ ಕಛೇರಿ ಮತ್ತು ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳ ಗಣಕಯಂತ್ರಗಳನ್ನು ಖುದ್ದಾಗಿ ಪರಿಶೀಲಿಸಿ Hard Disc ಗಳನ್ನು ತಮ್ಮ ವಶಕ್ಕೆ ಪಡೆದು ದಾಖಲೆಗಳನ್ನು ಖುದ್ದಾಗಿ ಪರಿಶೀಲಿಸಿದಾಗ ಪಾಲಿಕೆಗೆ ಕೇವಲ ಇದೊಂದೇ ಕಛೇರಿಯಿಂದ ನೂರಾರು ಕೋಟಿ ರು. ವಂಚನೆಯಾಗಿರುವ ಬೃಹತ್ ಹಗರಣ ಬೆಳಕಿಗೆ ಬರುತ್ತದೆ ಎಂದು ಮನವಿ ಮಾಡಿದ್ದಾರೆ.

ಆದ ಕಾರಣ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಿ ನಕಲಿ e – PID ಗಳನ್ನು ಸೃಷ್ಟಿಸಿ, ನಕಲಿ e – Khata ಗಳನ್ನು ನೀಡಿರುವ ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್ ರವರನ್ನು ಕೂಡಲೇ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಬೇಕು. ಹಾಗೆಯೇ ಹೊಸದಾಗಿ e – PID ಸಂಖ್ಯೆ ಸೃಷ್ಟಿಸಿಕೊಡುತ್ತಿರುವ GBA ಕೇಂದ್ರ ಕಛೇರಿ ಕಂದಾಯ ಇಲಾಖೆ ವಿಶೇಷ ಆಯುಕ್ತರ ಕಛೇರಿಯ ನೌಕರನೊಬ್ಬನ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.


Share It

You cannot copy content of this page