ಉಪಯುಕ್ತ ಸುದ್ದಿ

ಮೈಸೂರಿನಲ್ಲಿ ಆಸ್ತಿ ಹೊಂದುವವರಿಗೆ ಗುಡ್ ನ್ಯೂಸ್ : ಪ್ರಾಧಿಕಾರದಿಂದ ತಲೆ ಎತ್ತಲಿದೆ ಹೊಸ ಬಡಾವಣೆ

Share It

ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆ : 150 ಎಕರೆ ಪ್ರದೇಶದಲ್ಲಿ ನಿರ್ಮಾಣ
ಮೈಸೂರು: ಮೈಸೂರು ಸುತ್ತಮುತ್ತಲಿನ 150 ಎಕರೆ ಪ್ರದೇಶದಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೊಸ ಬಡಾವಣೆಯೊಂದನ್ನು ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳ ಅನುಮೋದನೆಗೆ ಕಾಯಲಾಗುತ್ತಿದೆ.

ಬಡವಾಣೆ ನಿರ್ಮಾಣದಿಂದ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 1 ಸಾವಿರ ಕೋಟಿ ರು. ಆದಾಯವನ್ನು ನಿರೀಕ್ಷೆ ಮಾಡಲಾಗಿದ್ದು, ಈಗಾಗಲೇ ಪ್ರಾಧಿಕಾರದ ವಶದಲ್ಲಿರುವ 150 ಎಕರೆ ಪ್ರದೇಶದಲ್ಲಿ 20*30 ಅಡಿ, 30*40 ಅಡಿ, 40*60 ಅಡಿ ಹಾಗೂ 50*80 ಅಡಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಲು ತೀರ್ಮಾನಿಸಲಾಗಿದೆ.

ಮೈಸೂರು ನಗರದ ಹೊರವಲಯದಲ್ಲಿನ ವಿಜಯನಗರ ಮೊದಲ ಹಂತದಿಂದ ನಾಲ್ಕನೇ ಹಂತ, ವಿಜಯಶ್ರೀಪುರ, ದಟ್ಟಗಳ್ಳಿ, ಶ್ರೀರಾಮಪುರ, ಜೆ.ಪಿ ನಗರ, ದೇವನೂರು, ರಾಜೀವ ನಗರ, ಲಲಿತಾದ್ರಿನಗರ ಮತ್ತು ಹೆಬ್ಬಾಳ ಪ್ರದೇಶಗಳನ್ನೊಳಗೊಂಡಂತೆ 150 ಎಕರೆ ವಿಸ್ತೀರ್ಣದಲ್ಲಿ ಬಡಾವಣೆ ನಿರ್ಮಾಣವಾಗಲಿದೆ.


Share It

You cannot copy content of this page