ಬೆಂಗಳೂರು: ರಾಜ್ಯದ 66 RTO ಕಚೇರಿಯಲ್ಲಿ Geo-fancing ಮತ್ತು Mvahan ಮೊಬೈಲ್ ಅಪ್ಲಿಕೇಶನ್ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಗೆ ಒತ್ತು ನೀಡಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ನೋಂದಣಿಯಾಗಿ ಚಾಲ್ತಿಯಲ್ಲಿರುವ ವಾಣಿಜ್ಯ ವಾಹನಗಳ ಅರ್ಹತಾ ಪ್ರಮಾಣ ಪತ್ರವನ್ನು ಪಡೆಯುವಾಗ ದೋಷಪೂರಿತ ಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಇಲಾಖೆ Geo-fencing ಆಧಾರಿತ್ mVahan ಫಿಟ್ನೆ ಸ್ ಮೊಬೈಲ್ ಅಪ್ಲಿ ಕೇಷನ್ ಅನ್ನು ರಾಜ್ಯದ ಎಲ್ಲ 66 ಆರ್ ಟಿ ಒ ಕಚೇರಿಗಳಲ್ಲಿ ಆರಂಭಿಸಲಾಗಿದೆ ಎಂದಿದ್ದಾರೆ.
ಸಾರಿಗೆ ಇಲಾಖೆ ರಾಜ್ಯ ದ ಎಲ್ಲ ಆರ್ ಟಿ ಒ ಕಚೇರಿಗಳಲ್ಲಿ mVahan ಫಿಟ್ನೆಸ್ ಮೊಬೈಲ್ ಅಪ್ಲಿ ಕೇಷನ್ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುತ್ತದೆ. ಸಾರಿಗೆ ವಾಹನಗಳಿಗೆ ಅರ್ಹತಾ ಪ್ರಮಾಣಪತ್ರ ನೀಡುವಿಕೆಯಲ್ಲಿ ನಡೆಯುತ್ತಿರುವ ದುರುದ್ದೇಶ ಪೂರ್ವಕ ತಪ್ಪುಗಳನ್ನು ಸರಿಪಡಿಸುವ ಸಂಬಂಧ, ಬಹುಕಾಲದಿಂದ ಟೀಕೆಗೆ ಗುರಿಯಾಗಿದದ ವಾಹನರಹಿತವಾಗಿ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ನೀಡುವಿಕೆಯನ್ನೆ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚಿನ ವಾಣಿಜ್ಯ (ಸಾರಿಗೆ) ವಾಹನಗಳು ನೋಂದಣಿಯಾಗಿ ಚಾಲ್ತಿಯಲ್ಲಿದ್ದು, ವಾಹನಗಳ ಫಿಟ್ನೆ ಸ್ ಪ್ರಮಾಣಪತ್ರ ನೀಡುವಿಕೆಯಲ್ಲಿ ಏಕರೂಪತೆ ಇಲ್ಲ, ಪಾರದರ್ಶಕ ವ್ಯವಸ್ಥೆ ಇಲ್ಲ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ NIC ಅಭಿವೃದಿಪಡಿಸಿರುವ ಹೊಸ mVahan ಫಿಟ್ನೆ ಸ್ ಮೊಬೈಲ್ ಅಪ್ಲಿಕೇಷನ್ ಅನ್ನು ಜಾರಿಗೆ ತರಲಾಗಿದೆ ಎಣಮದು ತಿಳಿಸಿದ್ದಾರೆ.
ಈ ಅಪ್ಲಿಕೇಷನ್ ಮೂಲಕ ಪ್ರತ್ರಿಯೊಂದು ಆರ್ ಟಿ ಒ ಕಚೇರಿಗಳಿಗೆ ವಾಹನಗಳನ್ನು ಭೌತಿಕವಾಗಿ ಪರಿಶೀಲಿಸುವ ಪ್ರದೇಶಗಳನ್ನು ನಿಗದಿಪಡಿಸಿ Geo-fencing ಮಾಡಲಾಗಿದೆ. ನಿಗದಿತ ಪ್ರದೇಶಗಳಿಗೆ ವಾಹನಗಳು ಭೌತಿಕವಾಗಿ ಹಾಜರಾದ ನಂತರ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾನುಸಾರ ಪರಿಶೀಲನೆ ನಡೆಸಲಾಗುತ್ತದೆ. ಪರಿಶೀಲನೆ ವೇಳೆ ವೇಳೆ ವಾಹನದ ವಿವಿಧ ಆರು ಛಾಯಾಚಿತ್ರಗಳನ್ನು ಕಡ್ಡಾಯವಾಗಿ ತೆಗೆದು ಅಪ್ಲಿ ಕೇಷನ್ ನಲ್ಲಿ ಅನುಮೋದನೆಗೊಂಡ ನಂತರ ವಾಹನದ ಅರ್ಹತಾ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ನಿಗದಿಪಡಿಸಿ ರುವ ಪ್ರದೇಶಗಳನ್ನು ಹೊರತುಪಡಿಸಿ, ಇನ್ನಿತರ ಪ್ರದೇಶಗಳಲ್ಲಿ ವಾಹನದ ಅರ್ಹತಾ ಪ್ರ ಮಾಣಪತ್ರವನ್ನು ನೀಡಲು ಸಾಧ್ಯವಿರುವುದಿಲ್ಲ.ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನದ ಅರ್ಹತಾ ಪ್ರಮಾಣಪತ್ರ ಕೋಡಿ ಬರುವ ವಾಹನಗಳ ಪೈಕಿ ಕನಿಷ್ಠ ಶೇ. 20 ವಾಹನಗಳನ್ನು ಮರು ತಪಾಸಣೆ ಮಾಡಲು ಸೂಚನೆಯನ್ನು ನೀಡಲಾಗಿದೆ. mVahan ಫಿಟ್ನೆ ಸ್ ಮೊಬೈಲ್ ಅಪ್ಲಿ ಕೇಷನನ್ ಅನ್ನು ದೇಶದ ಕೆಲವು ರಾಜ್ಯಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಅಪ್ಲಿಕೇಷನ್ ಜಾರಿಗೆ ಬಂದಿರುವುದರಿಂದ ವಾಹನಗಳ ಅರ್ಹತಾ ಪ್ರ ಮಾಣಪತ್ರ (Fitness Certificate) ನೀಡುವಿಕೆ ಪ್ರಕ್ರಿಯೆಯು ಹೆಚ್ಚು ಪಾರದರ್ಶಕವಾಗಿದೆ. ಇದರ ಮೂಲಕ ವಾಹನ ಮಾಲೀಕರು ಹಾಗೂ ಸಾರ್ವಜನಿಕರ ವಿಶ್ವಾಸಾರ್ಹತೆ ಹೆಚ್ಚಾಗಿದೆ. ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಹಾಯಕವಾಗಿದೆ. ದೀರ್ಘ ಕಾಲದಿಂದ ಅರ್ಹತಾ ಪ್ರಮಾಣಪತ್ರ ನೀಡಿಕೆಯಲ್ಲಿ ನಡೆಯುತ್ತಿದ್ದು, ಈ ವ್ಯವಸ್ಥೆಯ ಬಗ್ಗೆ ಇದ್ದ ಅಪಸ್ವರಕ್ಕೆ ತೆರೆ ಬೀಳಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

