ಬೆಂಗಳೂರು: ಟಿ-೨೦ ವಿಶ್ವಕಪ್ ಪಂದ್ಯಾವಳಿ ಅಂತಿಮ ಹಂತ ತಲುಪಿದ್ದು, ಇಂದು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಜೆ 6 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಎರಡು ತಂಡಗಳು ಸಮಬಲದಿಂದ ಕೂಡಿವೆ. ಭಾರತ ತಂಡ ಬಲಿಷ್ಠ ಇಂಗ್ಲೇAಡ್ ತಂಡವನ್ನು ಸೆಮಿಫೈನಲ್‌ನಲ್ಲಿ ಸೋಲಿಸಿ, ಫೈನಲ್ ತಲುಪಿದ್ದರೆ, ನ್ಯೂಜಿಲೆಂಡ್ ತಂಡ ಸೌತ್ ಆಫ್ರಿಕಾ ತಂಡವನ್ನು ಸೋಲಿಸಿ ಅಂತಿಮ ಘಟಕ್ಕೆ ಕಾಲಿಟ್ಟಿದೆ.
ಭಾರತದ ಪರ ಸಂಜು ಸ್ಯಾಮ್ಸನ್ ಅತ್ಯುತ್ತಮ ಲಯದಲ್ಲಿದ್ದು, ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ನಿರ್ಣಾಯಕ ಎರಡು ಪಂದ್ಯಗಳಲ್ಲಿ ಅರ್ಧಶತಕ ಭಾರಿಸಿ ಗಮನ ಸೆಳೆದಿದ್ದಾರೆ. ಅಂತಿಮ ಪಂದ್ಯದಲ್ಲಿ ಅವರ ಮೇಲೆ ಅಭಿಮಾನಿಗಳಿಗೆ ಅತಿಯಾದ ನಿರೀಕ್ಷೆಯಿದೆ. ಅಂತೆಯೇ ಬ್ಯಾಟಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಮಿಂಚಬೇಕಿದೆ. ಅವರು ಅಂತಿಮ ೧೧ರಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಕುತೂಹಲವೂ ಇದೆ.
ಉಳಿದಂತೆ ಶಿವಂ ದುಬೆ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ತಂಡದ ಬೆನ್ನೆಲುಬಾಗಿದ್ದು, ಬೌಲಿಂಗ್ ನಲ್ಲಿ ಬುಮ್ರಾ, ಹರ್ಷದೀಪ್ ಸಿಂಗ್ ಕಮಾಲ್ ಮಾಡಬೇಕಿದೆ. ಆಲ್‌ರೌಂಡ್ ಪ್ರದರ್ಶನ ತೋರುತ್ತಿರುವ ಅಕ್ಷರ್ ಪಟೇಲ್ ಮತ್ತೊಮ್ಮೆ ಗಮನ ಸೆಳೆಯುವ ಪ್ರದರ್ಶನ ನೀಡಬೇಕಾಗಿದೆ.
ನ್ಯೂಜಿಲೆಂಡ್ ತಂಡವೂ ಕೂಡ ಬಲಿಷ್ಠ ಬ್ಯಾಟಿಂಗಹ್ ಲೈನ್ ಅಪ್ ಹೊಂದಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಡರೆಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್ ಆಧಾರವಾಗಿದ್ದು, ಲೂಕಿ ಪರ್ಗ್ಯುಸನ್ಸ್, ಮ್ಯಾಟ್ ಹೆನ್ರಿ, ಇಶ್ ಸೋಧಿ ಬೌಲಿಂಗ್‌ನಲ್ಲಿ ಮಿಂಚುವ ತವಕದಲ್ಲಿದ್ದಾರೆ.

