ಅಪರಾಧ ಸುದ್ದಿ

ಹನಿಟ್ರಾಪ್ : ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತರ ಟಾರ್ಗೆಟ್ ಮಾಡುತ್ತಿದ್ದ ಮಹಿಳೆಯ ಬಂಧನ

Share It

ಬೆಳಗಾವಿ: ಮಹಾಲಿಂಗಪುರ ಮೂಲದ ದೀಪಾ ಅವಟಗಿ(33) ಎಂಬ ಮಹಿಳೆ ಇದೀಗ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಂಧಿತಳಾಗಿ ಬಿಡುಗಡೆಯಾಗಿದ್ದು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಆಕೆಯ ಸ್ನೇಹಿತ ಹುಕ್ಕೇರಿ ತಾಲೂಕಿನ ಶಿವಾನಂದ ಮಠಪತಿ, ಪರಾರಿಯಾಗಿದ್ದು ಈತ ಶ್ರೀಮಂತ ವ್ಯಕ್ತಿಗಳ ಬಗ್ಗೆ ದೀಪಾಳಿಗೆ ಪೂರಕ ಮಾಹಿತಿ ನೀಡಿ ಸಹಕರಿಸುತ್ತಿದ್ದ.

ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡ ದೀಪಾ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಳು. ಇದೀಗ ಈಕೆ ನಡೆಸುತ್ತಿದ್ದ ಹನಿಟ್ರ್ಯಾಪ್ ದಂಧೆಯನ್ನು ಬೆಳಗಾವಿ ಟಿಳಕವಾಡಿ ಪೊಲೀಸರು ಪತ್ತೆ ಹಚ್ಚಿ ಕ್ರಮಕ್ಕೆ ಮುಂದಾಗಿದ್ದಾರೆ.

ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಮೂಲಕ ಶ್ರೀಮಂತರನ್ನೇ ಪರಿಚಯ ಮಾಡಿಕೊಂಡು ಅವರನ್ನು ತನ್ನ ಬಲೆಗೆ ಬೀಳಿಸಿ ಕೊಳ್ಳುತ್ತಿದ್ದಳು. ನಂತರ ಅಶ್ಲೀಲ ಚಾಟ್ ನಡೆಸಿ ಬೆಳಗಾವಿ ವಸತಿ ಗೃಹಕ್ಕೆ ಭೇಟಿ ನೀಡಲು ಆಮಂತ್ರಿಸುತ್ತಿದ್ದಳು.

ಅಮಂತ್ರಣ ಸ್ವೀಕರಿಸಿ ಬಂದ ವ್ಯಕ್ತಿಗೆ ಸ್ನಾನ ಮಾಡಿ ಬರಲು ಹೇಳಿ ಆತ ಬಾತ್ ರೂಮಿಗೆ ಹೋದ ಕೂಡಲೇ ಹೊರಗಿನಿಂದ ಬಾಗಿಲು ಹಾಕಿ ಲಾಕ್ ಮಾಡುತ್ತಿದ್ದಳು. ಆ ವ್ಯಕ್ತಿ ತಂದಿದ್ದ ಮೊಬೈಲ್, ಹಣ, ಕಾರಿನ ಕೀ ಸಮೇತವಾಗಿ ಪರಾರಿ ಆಗುತ್ತಿದ್ದಳು. ಪರಾರಿಯಾಗುತ್ತಿರುವ ದೃಶ್ಯಗಳು ವಸತಿಗೃಹಗಳ ಸಿಸಿಟಿವಿ ಟಿವಿಯಲ್ಲಿ ಸೆರೆಯಾಗಿವೆ.

ನಂತರ ಬಾತ್ ರೂಮ್ ನಲ್ಲಿ ಸಿಲುಕಿದ್ದ ವ್ಯಕ್ತಿಗೆ ಹೇಗೋ ಸಂಪರ್ಕಿಸಿ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಹಣ ಕೊಡದೆ ಇದ್ದರೆ ದೂರು ದಾಖಲಿಸುವುದಾಗಿ ಹೇಳುತ್ತಿದ್ದಳು.

ಈ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ ಅವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ನಡುವೆ ಆರೋಪಿ ಬೇಲ್ ಪಡೆದು ಬಿಡುಗಡೆಯಾಗಿದ್ದಾನೆ. ಆರೋಪಿಯಿಂದ ಒಟ್ಟು 32 ಲಕ್ಷದ 86,000 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಫಾರ್ಚುನರ್ ಕಾರು, ಮಾರುತಿ ಕಾರು, ಕಾರು, 11 ಮೊಬೈಲ್, ಟ್ಯಾಬ್, ಡೊಂಗಲ್ ಮೂರು ಕಾರಿನ ಕೀ ಗಳು ಮತ್ತು 14 ಸಾವಿರ ರೂಪಾಯಿ ನಗದು ಸೇರಿವೆ. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page